ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್; ಲಿಂಗರಾಜ್ ಹರ್ಷ

0
30

ಕಲಬುರಗಿ: ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ಪರವಾಗಿ ಅತ್ಯಂತ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ತೀರ್ಪು ಶ್ಲಾಘನೀಯವಾದದ್ದು, ಇದನ್ನು ಡಿಎಂಎಸ್‍ಎಸ್ ಸಂಘಟನೆಯು ಸ್ವಾಗತಿಸುವುದರ ಜೊತೆಗೆ ಮತ್ತು 30 ವರ್ಷಗಳ ನಿರಂತರವಾದ ಹೋರಾಟಗಾರರ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದು ಡಿಎಂಎಸ್‍ಎಸ್ ರಾಜ್ಯಾಧ್ಯಕ್ಷ ಲಿಂಗರಾಜ್ ತಾರ್‍ಫೈಲ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜವಳಿ, ಮುಖಂಡರಾದ ದಿಗಂಬರ್ ತ್ರಿಮೂರ್ತಿ, ಮಲ್ಲಿಕಾರ್ಜುನ ದಿನ್ನಿ, ಮಾರುತಿ ಮುಗಟಿ,ರೇವಣಸಿದ್ದ ಕಟ್ಟಿಮನಿ, ಮಲ್ಲಿಕಾರ್ಜುನ್ ಬೊಮ್ಮನಹಳ್ಳಿ, ದೇವೇಂದ್ರ ಹಳ್ಳೊಳ್ಳಿ ರವಿ ಬೆಳಮಗಿ ಪತ್ರಿಕಾ ಪ್ರಕಟಣೆಯ ಮೂಲಕ ಹರುಷ ವ್ಯಕ್ತಪಡಿಸಿದ್ದಾರೆ.

ಒಳ ಮೀಸಲಾತಿಯಿಂದ ಸಮಾನತೆಗೆ ಯಾವುದೇ ಧಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಸುಪ್ರೀಂ ಕೋರ್ಟ್ ನ ಸಂವಿಧಾನಿಕ ಪೀಠದಿಂದ ತೀರ್ಪು ನೀಡಿದೆ, ಎಸ್ ಸಿ ಎಸ್ ಟಿ ಮೀಸಲಾತಿಯಲ್ಲಿ ಉಪ ವರ್ಗೀಕರಣ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರಿಂದ ಸವಿಧಾನಿಕ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Contact Your\'s Advertisement; 9902492681

ಉಪಪಂಗಡಗಳ ಒಳ ಮೀಸಲಾತಿಯಿಂದ ಸಮಾನತೆಯ ನಿಯಮ ಉಲ್ಲಂಘನೆ ಆಗಲ್ಲ ಎಂದು ಒಳ ಮೀಸಲಾತಿ ಪರವಾಗಿ ತೀರ್ಪು ಐತಿಹಾಸಿ ತೀರ್ಪು ನೀಡಿರುವುದು ಸ್ವಾಗತರವಾದದ್ದು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್ ಜವಳಿ ಅವರು ಪತ್ರಿಕ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here