ಬೀದರ್: ಇಂದು ಬೆಳ್ಳಂಬೆಳಗ್ಗೆ ಬೀದರ್ನಲ್ಲಿ ಎಸಿಬಿ ರೇಡ್ ನಡೆದಿದೆ. ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆ ಹುಮನಾಬಾದ್ ವಿಭಾಗದ ಜೆಇ ಆಗಿರುವ ವಿಜಯ ರೆಡ್ಡಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಸಂಪತ್ತು ಗಳಿಕೆ ಆರೋಪದ ಹಿನ್ನೆಲೆ, ಹುಮನಾಬಾದ ಪಟ್ಟಣದ ಬಸವ ನಗರದಲ್ಲಿರುವ ವಿಜಯ ರೆಡ್ಡಿ ಮನೆ ಹಾಗೂ ನಿರಣಾ ಗ್ರಾಮದ ಫಾರಂ ಹೌಸ್ ಮೇಲೆ ದಾಳಿ ನಡೆಸಲಾಗಿದೆ.
ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ ಮಾರ್ಗದರ್ಶನದಲ್ಲಿ ಹಾಗೂ ಬೀದರ್ ಡಿಎಸ್ಪಿ ಬಿ.ಬಿ.ಪಾಟೀಲ್ ನೇತ್ರತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.