ಬೀದರ್: ಭಾನಾಮತಿ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಆಸಾಮಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ನಡೆದಿದೆ. ವಿಶ್ವನಾಥ್ ರೆಡ್ಡಿ ಸಾರ್ವಜನಿಕರಿಂದ ಥಳಿತಕ್ಕೊಳಗಾದವನು.
ಆರೋಪಿ ವಿಶ್ವನಾಥ್ ರೆಡ್ಡಿ, ಕಳೆದ ನಾಲ್ಕು ದಿನದ ಹಿಂದೆ ಅಂಗಡಿ ಮುಂದೆ ಕುಂಕುಮ, ಅರಿಸಿನ ಸಿಂಪಡಿಸಿ ಮಾಟ ಮಂತ್ರ ಮಾಡ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ಫೂಟೇಜ್ ನೋಡಿದ ಸ್ಥಳೀಯರು ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.