ಸಿಎಂಗೆ ಶೋ ಕಾಸ್ ನೋಟೀಸ್: ರಾಜ್ಯಪಾಲರ ಅಧಿಕಾರ ದುರುಪಯೋಗ | ಸಿಪಿಐಎಂ ಆರೋಪ

0
87

ಕಲಬುರಗಿ: ಆರ್ಟಿಐ ಕಾರ್ಯಕರ್ತರೊಬ್ಬರ ಕೋರಿಕೆಯ ಮೇರೆಗೆ ಘನತೆವೆತ್ತ ರಾಜ್ಯಪಾಲರು ಧಿಡೀರನೆ ಅಂದೇ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ನೀಡುವ ಆಶ್ಚರ್ಯಕರ ಬೆಳವಣಿಗೆ ದೇಶದ ಗಮನ ಸೆಳೆದಿದೆ. ರಾಜ್ಯಪಾಲರೊಬ್ಬರು ಸಾಮಾನ್ಯ ಪ್ರಜೆಯೊಬ್ಬರ ಮನವಿ ಮೇರೆಗೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೀಡಿರುವ ಬೆಳವಣಿಗೆ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳಲ್ಲಿ ಆತಂಕ ಮೂಡಿಸಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರು ಮೂಡಾ ಪ್ರಕರಣಕ್ಕೆ ಸಂಬಂದಿಸಿ ವಿಧಾನ ಸಭೆಯಲ್ಲು ಹಾಗೂ ನೇರ ರಾಜ್ಯಪಾಲರಿಗೂ ವಿವರವಾದ ಮಾಹಿತಿ ನೀಡಿದಾಗಲೂ ಮತ್ತು
ಪ್ರಕರಣಕ್ಕೆ ಸಂಬಂದಿಸಿ ನ್ಯಾಯಾಂಗ ತನಿಖೆಗೆ ಕ್ರಮವಹಿಸಿದಾಗಲೂ, ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಇಷ್ಠೊಂದು ಅವಸರದಲ್ಲಿ ಬಳಸಿ, ಪ್ರಜಾಸತ್ತಾತ್ಮಕ ವಾಗಿ ಆಯ್ಕೆಯಾದ ಸರಕಾರದ ಮುಖ್ಯಮಂತ್ರಿಗೆ, ಆ ಸರಕಾರವನ್ನು ಪ್ರತಿನಿಧಿಸುವ ರಾಜ್ಯಪಾಲರು ಶೋಕಾಸ್ ನೋಟೀಸ್ ನೀಡಿರುವುದು ರಾಜ್ಯಪಾಲರ ಘನತೆಗೆ ತಕ್ಕುದಾಗಿ ಕಂಡು ಬರುತ್ತಿಲ್ಲ. ಬದಲಿಗೆ, ಸ್ಪಷ್ಟವಾಗಿ ಇದೊಂದು ಅಧಿಕಾರ ದುರುಪಯೋಗವಾಗಿದೆ ಎಂದು ಸಿಪಿಐಎಂ ಹೇಳಿದೆ. ರಾಜ್ಯಪಾಲರ ಕಛೇರಿಗಳನ್ನು ದುರುಪಯೋಗ ಮಾಡುವ ಬಿಜೆಪಿ ಹಾಗೂ ಒಕ್ಕೂಟ ಸರಕಾರದ ಮುಂದುವರೆದ ದುರ್ನಡೆಯ ಭಾಗವಾಗಿದೆಯೆಂದು ದುರಿದ್ದಾರೆ.

Contact Your\'s Advertisement; 9902492681

ಬಿಜೆಪಿ ಮತ್ತು ಅದರ ಒಕ್ಕೂಟ ಸರಕಾರ ವಿರೋಧ ಪಕ್ಷಗಳ ಸರಕಾರಗಳನ್ನು ದುರ್ಬಲಗೊಳಿಸಲು ಇಲ್ಲವೆ ಅಗತ್ಯ ಬಹುಮತವಿಲ್ಲದಿದ್ದರೂ ಬಲವಂತವಾಗಿ ಬಿಜೆಪಿಯ ಸರಕಾರ ಸ್ಥಾಪನೆಗೆ ಕ್ರಮವಹಿಸಲು ರಾಜ್ಯಪಾಲರ ಕಛೇರಿ ಹಾಗೂ ಅವರ ವಿವೇಚನಾಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಇದೇ ಮೊದಲ ಸಲವೇನಲ್ಲ ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕೆಂದು ವಿವರಿಸಿದೆ.

ರಾಜ್ಯದ ಜನತೆ ಬರಗಾಲ, ಅತೀವೃಷ್ಠಿ, ಬೆಲೆ ಏರಿಕೆಯ ಹೊರೆಗಳಿಂದ ಬಳಲುತ್ತಿರುವಾಗ ಬಿಜೆಪಿ ಒಂದು ರಚನಾತ್ಮಕ ವಿರೋದ ಪಕ್ಷವಾಗಿ ವಿಧಾನಸಭೆಯಲ್ಲಿ ತನ್ನ ಮಿತ್ರ ಪಕ್ಷದ ಬಲದೊಂದಿಗೆ ರಾಜ್ಯ ಸರಕಾರದ ನಡೆಯನ್ನು ಜನಪರವಾಗಿ ಬದಲಾಯಿಸುವ ಮತ್ತು ತನ್ನ ಒಕ್ಕೂಟ ಸರಕಾರದ ಬಲವನ್ನು ಉಪಯೋಗಿಸಿ ರಾಜ್ಯದ ನೈಜ ಅಭಿವೃದ್ಧಿಗೆ, ಸಂಕಷ್ಠದಲ್ಲಿರುವ ಜನತೆಗೆ ನೆರವಾಗಲು ಅಗತ್ಯ ಕ್ರಮವಹಿಸುವುದರ ಬದಲು ಒಂದೆಡೆ, ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಪ್ರಜಾಪ್ರಭುತ್ವ ವಿರೋದಿಯಾಗಿ ವರ್ತಿಸಿದರೆ, ಮತ್ತೊಂದೆಡೆ ಸಂಕಷ್ಠದಲ್ಲಿರುವ ಜನತೆ ಸಂಕಷ್ಠದ ವಿರುದ್ದ ಗಮನ ಹರಿಸದಂತೆ ಅವರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವನ್ನು ಹೆಣೆದಿದೆ ಎಂದು ಟೀಕಿಸಿದೆ.

ಮೊನ್ನೆ ನಡೆದ ಲೋಕ ಸಭಾ ಚುನಾವಣೆಯಲ್ಲಿ ತನಗೆ ಮತದಾರರು ಉಂಟು ಮಾಡಿದ ಹಿನ್ನಡೆಯಿಂದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಮಾತ್ರವಲ್ಲಾ, ಲೂಟಿಕೋರ ಕಾರ್ಪೊರೇಟ್ ಸಂಸ್ಥೆಗಳು ವ್ಯಗ್ರ ಗೊಂಡಿವೆ. ಹೀಗಾಗಿ, ವಿರೋದ ಪಕ್ಷಗಳ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುವ ಮತ್ತು ಉರುಳಿಸುವ ಕೆಲಸಕ್ಕೆ ಕೈ ಹಾಕಿವೆ ಎಂದು ಆರೋಪಿಸಿದ್ದಾರೆ.

ಇದರ ಭಾಗವಾಗಿಯೇ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯಾದ ಅನುಷ್ಠಾನ ನಿರ್ಧೇಶನಾಲಯ (ಈ.ಡಿ) ರಾಜ್ಯ ಸರಕಾರದ ಉನ್ನತ ಸಚಿವರು ಹಗರಣದಲ್ಲಿದ್ದಾರೆಂದು ಹೇಳುವಂತೆ ತನ್ನನ್ನು ಹಿಂಸಿಸಲಾಗಿದೆಯೆಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಪೋಲೀಸರಿಗೆ ದೂರು ಸಲ್ಲಿಸಿರುವುದನ್ನು ಮತ್ತು ಮೂಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ ನಂತರವೂ ಬಿಜೆಪಿ ಪಾದಯಾತ್ರೆಗೆ ಕ್ರಮವಹಿಸಿರುವುದನ್ನು ಮತ್ತು ಇದೀಗ ರಾಜ್ಯಪಾಲರ ನಡೆ ಈ ಎಲ್ಲವೂ ಅದನ್ನು ಸಮರ್ಥಿಸುತ್ತವೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಾಗೂ ಒಕ್ಕೂಟ ಸರಕಾರಗಳು ರಾಜ್ಯ ಸರಕಾರದ ಮೇಲೆ ನಡೆಸುತ್ತಿರುವ ಪ್ರಜಾಪ್ರಭುತ್ವ ಹಾಗೂ ಜನವಿರೋದಿ ಈ ದುರ್ಧಾಳಿಗಳನ್ನು ಈ ಕೂಡಲೆ ನಿಲ್ಲಿಸುವಂತೆ ಸಿಪಿಐಎಂ ರಾಜ್ಯ ಸಮಿತಿ ಆಗ್ರಹಿಸುತ್ತದೆ. ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳು ಬಿಜೆಪಿಯ ಇಂತಹ ಪ್ರಜಾಪ್ರಭುತ್ವ ವಿರೋಧ ದುರ್ನಡೆಯನ್ನು ಪ್ರತಿರೋಧಿಸಲು ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here