ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ವ್ಯಾಪ್ತಿಯ ಬಂದರುವಾಡ ಗ್ರಾಮದ ಅಂಗನವಾಡಿ ಕೇಂದ್ರ ಒಂದರಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದೆ.
ವಿಶ್ವ ಸ್ತನ ಪಾನ ಕಾರ್ಯಕ್ರಮಕ್ಕೆ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಅಪರ್ಣ ಭದ್ರಶೆಟ್ಟಿ ಮೇಡಮ್ ಜ್ಯೋತಿ ಬೆಳಗಿಸುವುದರ ಮೂಲಕ ಅವರು ಚಾಲನೆ ನೀಡಿ ಮಾತನಾಡಿಆಗಸ್ಟ್ ಮೊದಲನೇ ವಾರದಲ್ಲಿ ಈ ಕಾರ್ಯಕ್ರಮ ಜರಗುತ್ತದೆ.
ತಾಯಿ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇದ್ದು ಅದು ಅಮೃತಕ್ಕೆ ಸಮಾನವಾಗಿರುತ್ತದೆ. ಅದಕ್ಕಾಗಿ ತಾಯಂದಿರು ಎದೆ ಹಾಲು ಏಕೆ ನೀಡಬೇಕು? ಅದರ ಪ್ರಯೋಜನಗಳೇನು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಇದು ಸಹಜವಾಗಿ ತಾಯಂದಿರಿಗೆ ಯಾವುದೇ ಹಣದ ಖರ್ಚಿಲ್ಲದೆ ಲಭ್ಯವಾಗಿದ್ದು ಮಗುವಿಗೆ ಹುಟ್ಟಿದ ಅರ್ಧ ಗಂಟೆ ಒಳಗೆ ಹಾಲುಣಿಸುವುದನ್ನು ಎಲ್ಲರೂ ಪಾಲಿಸಬೇಕು ಎಂದು ಮಾಹಿತಿ ನೀಡಿದರು.
ತರುವಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಮಾತನಾಡಿ ಪ್ರಸ್ತುತವಾಗಿ ತಾಯಂದಿರಿಗೆ ಒಂದು ವಾರ ಸರಕಾರ ಮೀಸಲಾಗಿಸಿ ತಮಗೆ ಇದರ ಪ್ರಯೋಜನಗಳು ತಿಳಿಸುವಂತೆ ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತಿದ್ದರು ತಾಯಂದಿರು ಮಗುವಿಗೆ ಎದೆ ಹಾಲುಣಿಸುವುದರಿಂದ ತನ್ನ ಅಂಗ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಮಾರಕ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಎದೆಹಾಲು ಕ್ಯಾನ್ಸರ್ ದಂತಹ ಮಾರಕ ರೋಗವನ್ನು ತಡೆಗಟ್ಟುವಂಥ ದಿವ್ಯ ಔಷಧಿಯಾಗಿ ದೇವರು ಕಾಣಿಕೆಯಾಗಿ ನೀಡಿದ್ದಾನೆ.
ಅದಕ್ಕಾಗಿ ಎದೆಹಾಲು ಶ್ರೇಷ್ಠ ಎಂಬ ಅಂಶವನ್ನು ತಾಯಂದಿರು ಅರಿತು ಎಲ್ಲರನ್ನೂ ಎದೆ ಹಾಲು ಉಣಿಸುವಂತೆ ಬೆಂಬಲಿಸಿ ಜನಪ್ರಿಯಗೊಳಿಸಬೇಕಾಗಿದೆ ಅಂದಾಗ ಈ ದಿನಾಚರಣೆಗೆ ಒಂದು ಮಹತ್ವ ಬರುತ್ತದೆ ಎಂದು ವಿವರಿಸಿ ಹೆಚ್ಚುತ್ತಿರುವ ಕ್ಯಾನ್ಸರನ್ನು ತಡೆಗಟ್ಟುವುದು ನಿಮ್ಮ ಕೈಯಲ್ಲಿದೆ ಇದು ಅಲ್ಲದೆ ಪ್ರಸವ ನಂತರ ಅಧಿಕ ಕೊಬ್ಬು ಕರಗಿ ತಾಯಿಯ ದೇಹ ಮೊದಲಿನಂತೆ ಆಗುತ್ತದೆ. ಇದು ಅಲ್ಲದೆ ಇದರಂತ ಪರಿಶುದ್ಧ ಹಾಲು ಮತ್ತೊಂದಿಲ್ಲ ಇದು ಸಾವಿನ ಪ್ರಮಾಣ ಕಡಿಮೆ ಮಾಡುತ್ತದೆ . ಒಳ್ಳೆ ಪೌಷ್ಟಿಕಾಂಶ ಹೊಂದಿದ್ದು ರೋಗ ಮುಕ್ತ ಮಾಡುವ ಶಕ್ತಿ ಇದರಲ್ಲೇ ಅಡಗಿದ್ದು ಇದು ಲಸಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಕೃತಕವಾಗಿ ಏನೇ ಮಾಡಿದರೂ ಅದಕ್ಕೆ ಶ್ರೇಷ್ಠ ಎಂದು ಇನ್ನೂ ತಾಯಂದಿರು ಅರಿಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕರಾದ ಮಲ್ಕಮ್ಮ ಕಂಠಗೋಳ, ಸೈಯದ್ ಅಸರಾರ್ ಹಾಸಮಿ , ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿ , ಪ್ರಿಯ ಪ್ರಾಥಮಿಕ ಕಾಳಜಿ ಆರೋಗ್ಯ ಅಧಿಕಾರಿ,ಆಯುಷ್ಮಾನ್ ಆರೋಗ್ಯ ಮಂದಿರದ ಸಮುದಾಯ ಆರೋಗ್ಯ ಅಧಿಕಾರಿ ಭುವನೇಶ್ವರಿ, ಹಾಗೂ ಅಂಗನವಾಡಿ ಕಾರ್ಯಕರ್ತರಾದ ಸುನಂದ, ಸುವರ್ಣ, ಆಶಾ ಕಾರ್ಯಕರ್ತರಾದ ಭಾಗ್ಯಶ್ರೀ, ಪಾರ್ವತಿ, ಅಂಬುಬಾಯಿ, ಮರಿಯಮ್ಮ ಗ್ರಾಮದ ತಾಯಿಂದಿರು, ಗರ್ಭಿಣಿ ತಾಯಂದಿರು, ಇತರರು ಭಾಗವಹಿಸಿದ್ದರು.