- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: 2003ರಿಂದ ಅಧಿಕೃತವಾಗಿ ಸರ್ಕಾರದ ಮಟ್ಟದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಅನುಗುಣವಾಗಿ ಒಳಮೀಸಲಾತಿಯ ಜಾರಿಗಾಗಿ ನಡೆದಿದ್ದ ಹೊರಾಟಕ್ಕೆ ನ್ಯಾಯಂಗದಿಂದಲೂ ಸಾಂವಿಧಾನಿಕ ಚೌಕಟ್ಟು ಪಡೆಯುವಲ್ಲಿ ಯಶ ಸಿಕ್ಕಿರುವುದು ಆ ಸಮಾಜಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮಟ್ಟಿಗೆ ಒಳಮೀಸಲಾತಿ ಹೊರಾಟವು ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಹಕ್ಕು ಸಾಮಾಜಿಕ ನ್ಯಾಯಕ್ಕೆ ಹತ್ತಿರವಾಗಿದ್ದು ಇದಕೊಂದು ಪರಿಹಾರ ಕಂಡು ಹಿಡಿದು ಕೊನೆಯವರೆಗೂ ದಡ ಮುಟ್ಟಿಸಿದ ಕಿರ್ತಿ ಬಸವಮೂರ್ತಿ ಮಾದರ ಶ್ರೀಗಳು ಹಾಗೂ ಮಾದಿಗ ಸಮಾಜದ ಹಿರಿಯ ನಾಯಕರಾದ ಗೊವಿಂದ ಕಾರಜೋಳ ಮತ್ತು ಎ. ನಾರಾಯಣ ಸ್ವಾಮಿಯವರಿಗೆ ಸಲ್ಲುತ್ತದೆ ಎಂದರು.