ವಾಡಿ: ಗಿಡಮೂಲಿಕೆ ದಿನಾಚರಣೆ

0
139

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಾಲಯ ಬಡಾವಣೆಯಲ್ಲಿನ ಸಸ್ಯ ಪ್ರೇಮಿ ಜುಗಲ್ ಕಿಶೋರ್ ವರ್ಮಾ ಅವರನ್ನು ಗಿಡಮೂಲಿಕೆ ದಿನಾಚರಣೆ ಪ್ರಯುಕ್ತ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ ಅಭಿನಂದಿಸಿದರು.

ಈ ವೇಳೆ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ ಮಾತನಾಡಿ ಪತಂಜಲಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಆಯುರ್ವೇದ ಔಷಧದಲ್ಲಿ ಅಗಾಧ ಸಾಧನೆಯನ್ನು ಮಾಡಿದ ಶ್ರೀ ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನವನ್ನು ಗಿಡಮೂಲಿಕೆಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದರು.

Contact Your\'s Advertisement; 9902492681

ಮನುಕುಲಕ್ಕೆ ಮತ್ತು ಈ ಮಣ್ಣಿನ ಮೇಲಿರುವ ಸಕಲ ಜೀವಿಗಳಿಗು ಮರ ಗಿಡಗಳು ಜೀವವನ್ನು ನೀಡುತ್ತವೆ ಅದರ ಜೊತೆಗೆ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ ಎಂದು ಹೇಳಿದರು.

ಸಸ್ಯ ಪ್ರೇಮಿ ಜುಗಲ್ ಕಿಶೋರ್ ವರ್ಮಾ ಅವರು ತಮ್ಮಲ್ಲಿನ ಗಿಡಮೂಲಿಕೆಯ ಪತ್ರಿ, ಅಜಿವಾನ,ಅಮೃತ ಬಳ್ಳಿ,ತುಳಸಿ,ಅಲವೇರ ಇತ್ಯಾದಿ ಔಷಧೀಯ ಗುಣದ ಸಸ್ಯಗಳ ಮಾಹಿತಿ ನೀಡಿದರು. ಸುಮಾರು ಎರಡು ನೂರು ವಿವಿಧ ಸಸ್ಯಗಳನ್ನು ಸಂಗ್ರಹಿಸಿ ಪೋಷಿಸುತ್ತಿದ್ದು, ಬಡಾವಣೆಯ ಮತ್ತು ಪಟ್ಟಣದ ಸುಮಾರು ಜನರಿಗೆ ಸಸ್ಯಗಳ ಬಗ್ಗೆ, ಅದರಿಂದಾಗುವ ಪರಿಸರ ಸಂರಕ್ಷಣೆ ಬಗ್ಗೆ ಅವುಗಳನ್ನು ಮನೆಯ ಮುಂದೆ ಬೆಳೆಸುವುದರಿಂದ ಆಗುವ ಉಪಯೋಗಗಳನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಅಶೋಕ ಹರನಾಳ, ಶಿವಶಂಕರ ಕಾಶೆಟ್ಟಿ, ಕಾಶಿನಾಥ ಶೆಟಗಾರ, ಅಭಯ ಪಾಟೀಲ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here