ಶಂಕರ ದಾಸಿಮಯ್ಯ ನವರ ಜಯಂತಿ ಆಚರಣೆ

0
261

ಕಲಬುರಗಿ: ಸದ್ಗುರು ದಾಸಿಮಯ್ಯ ಕಾನೂನು ಸೇವಾ ಕೇಂದ್ರ ಕಛೇರಿಯಲ್ಲಿ ಶಂಕರ ದಾಸಿಮಯ್ಯ ನವರ ಜಯಂತಿ ಆಚರಣೆ ಮಾಡಲಾಯಿತು.

11 ನೇ ಶತಮಾನದಲ್ಲಿ ನುಲಿಗೆ ಬಣ್ಣ ಹಾಕುವ ಕಾಯಕ ಮಾಡುವ ಶರಣ ಶಂಕರ ದಾಸಿಮಯ್ಯನವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಕಲಾವಿದ ಚಿ. ಸುರೇಶ ಮ್ಯಾಳಗಿ ಯವರು ಪೂಜೆ ಸಲ್ಲಿಸಿದರು.

Contact Your\'s Advertisement; 9902492681

ಮೊದಲಿಗೆ ಜಿಲ್ಲಾ ಹಟಗಾರ ನೇಕಾರ ಸಮಾಜದ ಕಾರ್ಯದರ್ಶಿ ಜೇ.ವಿನೋದಕುಮಾರ ಎಲ್ಲರಿಗೂ ಸ್ವಾಗತಿಸಿದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕುರಹಿನಶೆಟ್ಟಿ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಮ್ಯಾಳಗಿ ಯವರು ಜಯಂತಿ ಉದ್ದೇಶಿಸಿ ಮಾತನಾಡುತ್ತ, ನೇಕಾರರ ಕುಲಗುರುಗಳು ಬಹಳ ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದಾರೆ ಅವರ ಬಗ್ಗೆ ಇನ್ನಷ್ಟು ಜಾಗ್ರತಿ ಮೂಡಿಸಿ ನೇಕಾರರ ಎಲ್ಲಾ ಒಳ ಪಂಗಡದವರು ಕೂಡಿಕೊಂಡು ಕ.ಕ ನೇಕಾರ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ರಚಿಸಬೇಕು ಎಂದು ತಿಳಿಸಿದರು.

ಇನ್ನೋರ್ವ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ತೊಗಟವೀರ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ ಈ ಸಂದರ್ಭದಲ್ಲಿ ಮಾತನಾಡಿ ನೇಕಾರ ಸಮುದಾಯ ಸಾಮಾಜಿಕ ವಾಗಿ ಮೇಲೆ ಬರಲು ಆರ್ಥಿಕ ಸ್ಥಿತಿ ಗತಿ ಉನ್ನತ ಮಟ್ಟದಲ್ಲಿ ತರಲು ಸರ್ಕಾರದ ಸೌಲಭ್ಯ ಪಡೆಯಲು ಈ ಸಂಸ್ಥೆ ಮಾರ್ಗದರ್ಶನ ಮಾಡಿದರೆ ಯುವಕರು ಬಲಾಢ್ಯರಾಗಿ ಸೇವೆ ಸಲ್ಲಿಸಲು ಅನುಕೂಲ ವಾಗುತದೆ ಎಂದು ತಿಳಿಸಿದರು.

ಶಂಕರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಶಿವಲಿಂಗಪ್ಪಾ ಅಷ್ಟಗಿ ಯವರು ಮಾತನಾಡಿ ಕಳೆದ 3 ವರ್ಷಗಳಿಂದ ಸಮುದಾಯ ಜಾಗ್ರತಿ ಮಾಡುವ ಕಾರ್ಯದಲ್ಲಿ ತೊಡಗಿದ ಪ್ರಯುಕ್ತ ಇಂದು ಸಮಾಜದಲ್ಲಿ ನೇಕಾರ ಸಮುದಾಯದ ವಿವಿಧ ಸಮಾಜದ ವ್ಯಕ್ತಿಗಳಿಗೆ ಗೌರವದಿಂದ ನೋಡುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ತಿಳಿಸಲು ನನಗೆ ಹೆಮ್ಮೆ ಯಾಗುತ್ತಿದೆ ಎಂದು ಹೇಳಿದರು.

ಕೊನೆಯಲ್ಲಿ ಯುವ ನಾಯಕ ಮ್ಯಾಳಗಿ ಸುರೇಶ ವಂದಿಸಿದರು. ವಿಶೇಷ ಮಾಹಿತಿ, 10 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ (ಬುಧವಾರ) ದಂದು, ಸಂಜೆ 5.30 ಕ್ಕೆ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಉಪನ್ಯಾಸವನ್ನು, ಬಯಲು ಗ್ರಂಥಾಲಯದ ಜನಕರಾದ ಹಾಗೂ ಖ್ಯಾತ ಪತ್ರಕರ್ತರಾದ ಸುಭಾಷ್ ಬಣಗಾರ ನೀಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here