ಕಲಬುರಗಿ: ನಾಗನಹಳ್ಳಿ ಗ್ರಾಮದಲ್ಲಿ ಡೆಂಗೆ ಜ್ವರ ನಿಯಂತ್ರಣದ ಕುರಿತು ಶ್ರೀಮತಿ ವ್ಹಿ ಜಿ ಮಹಿಳಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜನ ಜಾಗೃತಿ ಜಾಥಾ ನಡೆಸಲಾಯಿತು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಜನ ಜಾಗೃತಿ ಜಾಥ ಅಭಿಯಾನಕ್ಕೆ ಚಾಲನೆ ನೀಡಿ ಡೆಂಗ್ಯೂ ಜ್ವರವು ಈಗ ರಾಜ್ಯದಾದ್ಯಂತ ಮಾರಕವಾಗಿ ಹರಡುತ್ತಿದ್ದು.ಈ ರೋಗದ ಕುರಿತು ಹಳ್ಳಿ ಹಳ್ಳಿಗಳಲ್ಲಿ ಜನ ಜಾಗೃತಿ ಮೂಡಿಸುವದು ಅತ್ಯಗತ್ಯವಾಗಿದೆ.
ಈ ಮಳೆಗಾಲದಲ್ಲಿ ಮಳೆ ಬಂದು ಮನೆಯ ಸುತ್ತ ಮುತ್ತ ನೀರು ನಿಲ್ಲುವದು ಸಹಜ ಇಂತಹ ನಿಂತ ನೀರಿನಲ್ಲಿ ಹುಟ್ಟಿದ ಸೊಳ್ಳೆಗಳಿಂದ ರೋಗ ಹರಡುತ್ತದೆ.ಈ ರೀತಿ ಮನೆಯ ಸುತ್ತ ಮುತ್ತ ಒಳ್ಳೆಯ ವಾತಾವರಣ ನಿರ್ಮಿಸಿ ಪರಿಸರ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದು ಹೇಳಿದರು.
ಇಂತಹ ವಿಷಯದ ಕುರಿತು ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುತ್ತಿರುವ ನಮ್ಮ ಸಂಸ್ಥೆಯ ಶ್ರೀಮತಿ ವ್ಹಿ ಜಿ ಮಹಿಳಾ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿನಿಯರ ಹಾಗೂ ಕಾರ್ಯಕ್ರಮ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಹಳ್ಳಿಯ ಬೀದಿ ಬೀದಿಗಳಲ್ಲಿ ಪ್ರಭಾತ್ ಫೇರಿ ನಡೆಸಿ ಮನೆ ಮನೆಗೆ ತೆರಳಿ ಗ್ರಾಮಸ್ಥರಲ್ಲಿ ವಿಧ್ಯಾರ್ಥಿನಿಯರು ಡೆಂಗ್ಯೂ ಕುರಿತು ಜನ ಜಾಗೃತಿ ಮೂಡಿಸಿದರು.
ಈ ಅಭಿಯಾನದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ರಾಜೇಂದ್ರ ಕೊಂಡಾ, ಡಾ ಮೋಹನರಾಜ್ ಪತ್ತಾರ, ನಂದಿಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ಲಕ್ಷ್ಮೀಬಾಯಿ ಕುಪೇಂದ್ರ ವರ್ಮಾ, ಸದಸ್ಯರಾದ ಶ್ರೀಮತಿ ಭಾರತಿಬಾಯಿ ಶಿವಶರಪ್ಪ,ಭಿಮಾಶಂಕರ ನಂದಿಕೂರು, ಶ್ರೀಮತಿ ಕಸ್ತೂರಿಬಾಯಿ ನಾಗೇಂದ್ರಪ್ಪ ಆರೋಗ್ಯ ಇಲಾಖೆಯ ಸಂತೋಷ ಮುಳುಜೆ,ಆಶಾ ಕಾರ್ಯಕರ್ತೆ ಶ್ರೀಮತಿ ಲಕ್ಷ್ಮೀ ಬಾಯಿ, ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ ಪ್ರೇಮಚಂದ್ ಚವಾಣ್, ಸಂಗಮೇಶ ತುಪ್ಪದ ಭಾಗವಹಿಸಿದ್ದರು.
ಈ ಅಭಿಯಾನದ ನೇತ್ರತ್ವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ನೋಡಲ್ ಅಧಿಕಾರಿ ಡಾ ಮಹೇಶ್ ಕುಮಾರ್ ಗಂವ್ಹಾರ, ಡಾ ರೇಣುಕಾ ಎಚ್, ಶ್ರೀಮತಿ ಸುಷ್ಮಾ ಕೆ ವಹಿಸಿದ್ದರು.