ಕಲಬುರಗಿ: ಶರಣಬಸವೇಶ್ವರ ತೊಟ್ಟಿಲು ಕಾರ್ಯಕ್ರಮ

1
150

ಕಲಬುರಗಿ: ಶ್ರಾವಣ ಮಾಸ ನಿಮಿತ್ತ ಜಯನಗರ ಶಿವ ಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ 7 ನೆಯ ದಿನವಾದ ರವಿವಾರ ಸಂಜೆ ಶರಣಬಸವೇಶ್ವರರ ನಾಮಕರಣ ತೊಟ್ಟಿಲು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ನಗರದ ನಾನಾ ಬಡಾವಣೆಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಹೆಣ್ಣುಮಕ್ಕಳು ಆಗಮಿಸಿ ತೊಟ್ಟಿಲು ತೂಗುತ್ತ ಪದಗಳನ್ನು ಹಾಡಿದರು.ಇದಕ್ಕೂ ಮೊದಲು ತೊಟ್ಟಿಲಿಗೆ ಅಲಂಕಾರ ಮಾಡಿ ಪೂಜೆ ನೆರವೇರಿಸಿ, ಮುತ್ತೈದೆ ಹೆಣ್ಣು ಮಕ್ಕಳಿಗೆ ಸೀರೆ ಉಡಿಸುವ ಶಾಸ್ತ್ರೋತ್ಸವ ನಡೆಯಿತು.ನೆರೆದಿದ್ದ ಜನರಿಂದ ಶ್ರೀ ಶರಣಬಸವೇಶ್ವರ ಮಹಾರಾಜ್ ಕೀ ಜೈ ಎಂದು ಘೋಷಣೆಗಳು ಮೊಳಗಿದವು.

Contact Your\'s Advertisement; 9902492681

ನಂತರ ಮಾತನಾಡಿದ ಪುರಾಣ ಪಂಡಿತ ವೇ.ಮೂ. ಮಲ್ಲಿಕಾರ್ಜುನ ಶಾಸ್ತ್ರೀ ಸರಳತೆ ಜೊತೆಗೆ ಕಾಯಕ ಗುಣವು ಶರಣರಲ್ಲಿ ಕಾಣಬಹುದು. ಭಕ್ತಿ ಎಂಬುದು ಮನಸ್ಸಿನಲ್ಲಿರಬೇಕೆ ಹೊರತು ಮಸ್ತೀಕದಲ್ಲಲ್ಲ.

ದೇವರು ಎಂದರೆ ಒಪ್ಪಬಹುದು.ಆದರೆ ಕೈಲಾಸ ಎಂಬುದು ಕರ್ಮ ಕಳೆಯುವ ಸ್ಥಾನವಾಗಿದೆ.ದೇವರನ್ನು ಭಕ್ತಿಯಿಂದ ಅನುಭವಿಸಬೇಕು.ನಿರ್ಮಲ ಮನಸ್ಸು ಉಳ್ಳ ಶರಣಬಸವೇಶ್ವರು ದೈವತ್ವವನ್ನು ಗೆದ್ದವರು.ಆಡಂಬರ, ಕಪಟಗಳ ಭಾವನೆಯನ್ನು ತೊರೆದು ಸರಳತೆಯ ಬದುಕು ಸಾಗಿಸಿದರು.

ಅರಳಗುಂಡಗಿಯಲ್ಲಿ ಶರಣಬಸವೇಶ್ವರರ ಜನನವಾದರೂ ಕಲಬುರ್ಗಿಯಲ್ಲಿ ನೆಲೆಸಿ ಭಕ್ತರ ಆರಾಧ್ಯ ದೈವ ಎನಿಸಿಕೊಂಡವರು.ಬೇಡಿ ಬಂದ ಭಕ್ತರಿಗೆ ಕರುಣಿಸಿ ಕೋಟಿಗೊಬ್ಬ ಶರಣ‌ ಎನಿಸಿಕೊಂಡರು.ಜಯನಗರದ ಶಿವ ಮಂದಿರದಲ್ಲಿ ಶರಣಬಸವೇಶ್ವರರ ನಾಮಕರಣ‌ ಮಾಡುವ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟಿರುವ ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಶಿವ ಮಂದಿರದಲ್ಲಿ ನಡೆದ ತೊಟ್ಟಿಲು ಕಾರ್ಯಕ್ರಮ ಐತಿಹಾಸಿಕವಾಗಿದೆ.ಶರಣಬಸವೇಶ್ವರ ಕೃಪೆ ಎಲ್ಲರ ಮೇಲೂ ಇರಲಿ.ಒಂದು ತಿಂಗಳು ಹಮ್ಮಿಕೊಂಡಿರುವ ಪುರಾಣ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಟ್ರಸ್ಟ್ ಪದಾಧಿಕಾರಿಗಳಾದ ವಿರೇಶ ದಂಡೋತಿ.ಬಂಡಪ್ಪ ಕೇಸೂರ,ಬಸವರಾಜ ಮಾಗಿ, ಸಿದ್ಧಲಿಂಗ ಗುಬ್ಬಿ, ಶಿವಕುಮಾರ ಪಾಟೀಲ, ಮಲ್ಲಯ್ಯ ಸ್ವಾಮಿ ಗಂಗಾಧರಮಠ.ಮನೋಹರ ಬಡಶೇಷಿ,ಹಿರಿಯ ಸದಸ್ಯರಾದ ಎಂ.ಡಿ.ಮಠಪತಿ, ಭೀಮಾಶಂಕರ ಶೆಟ್ಟಿ, ವೀರಪ್ಪ ಹುಡಗಿ, ಶಿವಪುತ್ರಪ್ಪ ಮರಡಿ,ಮಲ್ಲಯ್ಯ ಸ್ವಾಮಿ ಬೀದಿಮನಿ,ಪ್ರಭು ಪಾಟೀಲ, ಮಂಜುನಾಥ ಸಿರಗಾಪೂರ, ಮಲ್ಲಿನಾಥ ಸಂಗಶೆಟ್ಟಿ, ಪರಮೇಶ್ವರ ಹಡಪದ,ಅಮೀತ ನಾಗನಹಳ್ಳಿ, ಮಹಿಳಾ ಘಟಕದ ಪದಾಧಿಕಾರಿಗಳಾದ ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ಅನಿತಾ ನವಣಿ,ಲತಾ ತುಪ್ಪದ, ಗೀತಾ ಸಿರಗಾಪೂರ,ವಿಜಯಾ ದಂಡೋತಿ, ಗೀತಾ ಹುಡುಗಿ,ಪಾರ್ವತಿ ಶೆಟ್ಟಿ ಸೇರಿದಂತೆ ವಿವಿಧ ಬಡಾವಣೆಗಳ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.

1 ಕಾಮೆಂಟ್

  1. ನೀಮ್ಮ ಸುದ್ದಿ ಬಹಳ ಆಕರ್ಷಕವಾಗಿ ಸಾವ೯ಜನಿಕರಿಗೆ ಮನೆ ಮುಟ್ಟುವ ಹಾಗೆ ಇರುತ್ತದೆ ನಿಮ್ಮ ಸುದ್ದಿ ವಾಹಿನಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ‌ಸರಿಸಲು ಬಸವಾದಿ ಶರಣರಲ್ಲಿ ಪಾ೯ಥೀಸಿಕೂಳ್ಳುತೆವೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here