ವಿ.ಸಿದ್ಧರಾಮಣ್ಣ ಶರಣರ ನಿಧನಕ್ಕೆ ಭಾಲ್ಕಿ ಶ್ರೀ ಸಂತಾಪ

0
31

ಭಾಲ್ಕಿ; ಶರಣ ವಿ.ಸಿದ್ಧರಾಮಣ್ಣ ಶರಣರು ನಿಧನಕ್ಕೆ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿ.ಸಿದ್ಧರಾಮಣ್ಣ ಶರಣರು ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಶ್ರೀಮಠಕ್ಕೆ ಆಗಮಿಸಿ, ಶ್ರೀಮಠದ ಬಸವತತ್ವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಪೂಜ್ಯರ ಮಾರ್ಗದರ್ಶನದಲ್ಲಿ ವಿ.ಸಿದ್ಧರಾಮಣ್ಣನವರು ರಚಿಸಿರುವ ಶರಣರ ನಾಟಕಗಳನ್ನು ಜಿಲ್ಲೆಯಾದ್ಯಂತ ಪ್ರದರ್ಶನಗೊಳ್ಳುತ್ತಿದ್ದವು. ವಚನ ಸಂಗೀತ ನಡೆಯುತಿತ್ತು.

Contact Your\'s Advertisement; 9902492681

ಶರಣರ ಕುರಿತು ರಚಿಸಿರುವ ಗೀತೆಗಳು ಅಮರತ್ವ ಪಡೆದಿವೆ. ಷಟ್‍ಸ್ಥಲ ಧ್ವಜ ಗೀತೆ, ಬಸವಣ್ಣನವರ ಜಯ ಜಯ ಗುರು ಬಸವಣ್ಣ ಎಂಬ ಮಂಗಳಾರತಿ ಈ ರೀತಿಯ ಅನೇಕ ಗೀತೆಗಳು ಜನರ ಬಾಯಲ್ಲಿ ಕುಣಿದಾಡುತ್ತಿವೆ. ಬಸವಕಲ್ಯಾಣ ಅನುಭವಮಂಟಪ ಸಂಚಾಲಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು.

ಬಸವತತ್ವ ಪ್ರಸಾರಕ್ಕೆ ತಮ್ಮ ಆಯುಷ್ಯವನ್ನೆ ಮುಡುಪಾಗಿಟ್ಟಿದ ಶತಾಯುಷಿ ವಿ.ಸಿದ್ಧರಾಮಣ್ಣ ಶರಣರು. ಅವರ ನಿಧನದಿಂದ ಬಸವತತ್ವಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಪೂಜ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿ.ಸಿದ್ಧರಾಮಣ್ಣ ಶರಣರ ಅಂತ್ಯ ಸಂಸ್ಕಾರವನ್ನು ನಾಳೆ 2 ಗಂಟೆಗೆ ವಿಜಯನಗರ ಜಿಲ್ಲೆಯ ಮತ್ತಿಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದವರಿಂದ ತಿಳಿದು ಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here