ಶಹಾಬಾದ: ಆಧುನಿಕತೆಯ ಅಬ್ಬರ ಮತ್ತು ಜಗಮಗಿಸುವ ಜಾಗತಿಕರಣದ ಇಂದಿನ ದಿನಮಾನಗಳಲ್ಲಿ ಪ್ರೀತಿಯಿಂದ ಎಲ್ಲರನು ಒಪ್ಪಿಅಪ್ಪಿಕೊಳ್ಳುವ ನೆಲಮೂಲ ಸಂಸ್ಕøತಿ ಎಲ್ಲಡೆ ನೆಲೆಸಲಿ ಎಂದು ಸಾಹಿತಿ ಸಿ.ಎಸ್.ಆನಂದ ಮಾರ್ಮಿಕವಾಗಿ ನುಡಿದರು.
ಶಹಾಬಾದ ಬಸವ ಸಮಿತಿ, ಭಂಕೂರ ಅವರು ಹಮ್ಮಿಕೊಂಡಿದ್ದ ನಯನ ಪ್ರಕಾಶನ ಮೈಸೂರು ಪ್ರಕಟಿಸಿ ಹೊರತಂದಿರುವ ಹಿರಿಯ ಸಾಹಿತಿಗಳಾದ ವೀರಣ್ಣ ಕುಂಬಾರ ಅವರು ರಚಿಸಿದ ಕುಂಬಾರಣ್ಣನ ವಚನಗಳು ಮತ್ತು ಸಾವಿರದ ಲಿಂಗನುಡಿಗಳು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತ, ಇಂದು ನಾವುಗಳು ಜಾತಿ, ಮತ, ಧರ್ಮ, ದೇವರುಗಳ ಆಚರಣೆಗಳನ್ನು ಮೀರಿ ಕೂಡಿ ಬಾಳುವ, ಕೂಡಿ ಉಣ್ಣುವ, ಕೂಡಿ ಸಂಭ್ರಮಿಸುವ ಮಾನವೀತೆಯ ಬದುಕು ಸಾಗಿಸಬೇಕು. ನಮ್ಮ ದೈನಿಕ ಬದುಕು ಆಧ್ಯಾತ್ಮ ಆಗಬೇಕು; ಮನುಜ ಲೋಕ ಬೆರೆತು ಬದುಕಬೇಕು ಎಂದು ಹೇಳಿದರು.
ಕಲಬುರಗಿಯ ಹಿರಿಯ ಸಾಹಿತಿಗಳಾದ ಎಚ್.ಬಿ.ತೀರ್ಥೆ ಕೃತಿಗಳನ್ನು ಪರಿಚಯಿಸುತ್ತ, ವೀರಣ್ಣ ಕುಂಬಾರರು ತಮ್ಮ ಬದುಕಿನಂಗಳದಲ್ಲಿಕಂಡುಂಡ ಜೀವನಾನುಭವ ಮತ್ತುತಾವು ಸಾಗಿಸುತ್ತ ಬಂದಿರುವ ಶರಣ ಸಂಸ್ಕøತಿಯ ಬದುಕಿನಿಂದ ಈ ಎರಡು ಮೌಲಿಕ ಕೃತಿಗಳನ್ನು ತುಂಬಾ ಅರ್ಥಪೂರ್ಣವಾಗಿ ರಚಿಸಿದ್ದಾರೆ.
ಈ ಕೃತಿಗಳಲ್ಲಿಯ ವಿಚಾರಗಳು, ಚಿಂತನೆಗಳು ಮತ್ತು ಆಧುನಿಕ ವಚನಗಳು ಸಮಾಜದ ಎಲ್ಲ ವಯೋಮಾನದವರು ಓದಿ ನೆಮ್ಮದಿಯ ಬದುಕು ನಡೆಸಲು ಮಾರ್ಗದರ್ಶನ ಮಾಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಪೂಜ್ಯ ಶ್ರೀರುದ್ರಸ್ವಾಮಿಗಳು, ಅಧ್ಯಕ್ಷತೆ ಶ್ರೀ ನೀಲಕಂಠ ಮಾದುಗೋಳ್ಕರ ವಹಿಸಿದ್ದರು.
ಕೃತಿಗಳ ಲೇಖಕರಾದ ವೀರಣ್ಣ ಕುಂಬಾರ, ಸಮಿತಿಯ ಹಿರಿಯರಾದ ಅಮೃತ ಮಾನ್ಕರ, ರೇವಣಸಿದ್ಧಪ್ಪ, ಗುರುಪಾದ ಕುಂಬಾರ ಎಸ್.ಕೆ.ಕೋಬಾಳ. ಶರಣು ವಸ್ತ್ರದ, ಮರಲಿಂಗ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.