ಕಲಬುರಗಿ: ಗುಲ್ಬರ್ಗ ವಿದ್ಯಾಲಯ ಕಲಬುರಗಿಯ ನೇಮಕಾತಿಯಲ್ಲಿ ಹೊರಗುತ್ತಿಗೆ ನೌಕರರಿಗೆ ಆದ್ಯತೆ ನೀಡುವ ಹಾಗೂ ಹೊರಗುತ್ತಿಗೆ ನೌಕರರಿಗೆ ವೇತನಕ್ಕಾಗಿ ಸರ್ಕಾರದಿಂದ ಅನುದಾನ ನೀಡುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಭೇಟಿ ಮಾಡಲಾಯಿತು.
ಕಾರ್ಮಿಕ ಮುಖಂಡರಾದ ಸುನಿಲ್ ಮಾನ್ಪಡೆ, ಸಂಜೀವಕುಮಾರ್ ಕಾಂಬ್ಳೆ, ಗೌರವಾಧ್ಯಕ್ಷರಾದ ವಿಜಯ್ ಕುಮಾರ್ ಕೆಂಗಲ್ ಅಧ್ಯಕ್ಷರಾದ ಶೀಲಪ್ರಕಾಶ್ ದೊಡ್ಡಮನಿ, ಕಾರ್ಯದರ್ಶಿ ಚಂದ್ರಶೇಖರ್ ಸಾವಳಗಿ, ಖಜಾಂಚಿ ನಾಗಿಂದ್ರಪ್ಪಾ ಪಟ್ಟೇದ, ದಿಲೀಪ್ ಪಾಟೀಲ್ ಶ್ರೀನಿವಾಸ ಶಿವಲಿಂಗಪ್ಪ ಅಂಬುಜಾ ಕದಂ, ಗೀತಾ ಮಾಕುಂಡಿ, ಸವಿತಾ ರಾಠೋಡ್, ಮಾಯಾದೇವಿ ಹಾಗೂ ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.