ವಚನ ದರ್ಶನ ಪುಸ್ತಕ ಮರು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬೇಲಿ ಮಠದ ಶ್ರೀಗಳು ಹೋಗದಿರಲು ನಿರ್ಧಾರ

0
126

ಕಲಬುರಗಿ: ಬೆಂಗಳೂರಿನಲ್ಲಿ ಪ್ರಜ್ಞಾ ಪ್ರವಾಹದಿಂದ ಪ್ರಕಟಿತವಾಗಿ ಇದೇ 20 ರಂದು ಮರು ಲೋಕಾರ್ಪಣೆಗೊಳ್ಳಲಿರುವ “ವಚನ ದರ್ಶನ ” ಪುಸ್ತಕ ಬಿಡುಗಡೆಗೆ ಪೂಜ್ಯ ಶ್ರೀ ಬೇಲಿಮಠದ ಅಪ್ಪಗಳು ಹೋಗದಿರಲು ನಿರ್ಧರಿಸಿದ್ದಾರೆ.

“ವಚನ ದರ್ಶನ ” ಎಂದಾಕ್ಷಣ ಸಹಜವಾಗಿ ಪುಳಕಿತಗೊಂಡು ಕಾರ್ಯಕ್ರಮಕ್ಕೆ ಒಪ್ಪಿದ್ದರಾದರೂ,ನಂತರದಲ್ಲಿ ಪೂರ್ವಭಾವಿಯಾಗಿ ಗ್ರಂಥವನ್ನು ದೊರಕಿಸಿಕೊಂಡು ಸಮಗ್ರವಾಗಿ ಪುಸ್ತಕದ ಅಧ್ಯಯನವನ್ನು ಕೈಕೊಂಡ ಹಿನ್ನೆಲೆಯಲ್ಲಿ ಸಭೆಗೆ ಹೋಗದಿರುವ ಈ ನಿರ್ಧಾರವನ್ನು ಕೈಕೊಂಡಿದ್ದಾರೆ.

Contact Your\'s Advertisement; 9902492681

ಪುಸ್ತಕದಲ್ಲಿ ಸೂಕ್ಷ್ಮವಾಗಿ ಹಾಗೂ ದೋಷಪೂರಿತವಾಗಿ ನಿರೂಪಿಸಲ್ಪಟ್ಟ ಬಸವ ವಿರೋಧಿ ಸಂಗತಿಗಳನ್ನು ಅವರು ಟಿಪ್ಪಣಿಮಾಡಿಕೊಂಡಿದ್ದು, ಅವೆಲ್ಲವನ್ನೂ ಅವರದೇ ಆದ ಆ ಸಭೆಯಲ್ಲಿ ನಿರ್ದಾಕ್ಷಿಣ್ಯವಾಗಿ ಖಂಡಿಸಿಬರಲು ಈ ಮೊದಲು ಉದ್ದೇಶಿಸಿದ್ದರಾದರೂ, ಇಂತಹ ಸಭೆಗಳಿಗೆ ಹೋಗದೇ ಇರುವ ಮೂಲಕ ತೋರಿಸುವ ಅಸಹಕಾರದ ಪ್ರತಿಭಟನೆ ನಿಜಕ್ಕೂ ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ ಎಂದೆನ್ನಿಸಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.

ಬಸವ ತತ್ವಗಳನ್ನು ಎಲ್ಲ ಕಾಲದ ಎಲ್ಲನೆಲೆಗಳಲ್ಲಿ ಪ್ರಸ್ತುತಗೊಳಿಸುವ ಬಸವನಿಷ್ಠರ ಜತೆ ಯಾವಾಗಲೂ ಇದ್ದು ಮಾರ್ಗದರ್ಶನ ಮಾಡುವ ನಿರ್ಧಾರ ಕೈಕೊಂಡಿದ್ದು ಎಲ್ಲರನ್ನೂ ಅತ್ಯಂತ ಹರುಷಿತರಾಗುವಂತೆ ಮಾಡಿದೆ.

ಪೂಜ್ಯರ ಈ ಬಸವಪರ ನಿಲುವಿಗೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ ಎಂದು ಅಶೋಕ ಬರಗುಂಡಿ, ರವೀಂದ್ರ ಶಾಬಾದಿ, ಸಂಜಯ ಮಾಕಲ್, ಅರವಿಂದ ಜತ್ತಿ, ವಿಶ್ವಾರಾಧ್ಯ ಸತ್ಯಂಪೇಟೆ, ಶಿವಣ್ಣ ಇಜೇರಿ, ಕೋರಣೇಶ್ವರ ಶ್ರೀ, ಆರ್.ಜಿ.‌ಶೆಟಗಾರ, ಪ್ರೊ.‌ ಆರ್.ಕೆ. ಹುಡಗಿ, ಡಾ. ಮೀನಾಕ್ಷಿ ಬಾಳಿ ಇತರರು ಶ್ರೀಗಳ ನಿಲುವನ್ನು ಸ್ವಾಗತಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here