ವಸತಿ ನಿಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸಂವಿಧಾನ ಶಿಲ್ಪಿ ಭಾವಚಿತ್ರ ಅನಾವರಣ

0
40

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕೀಯರ ವಸತಿ ನಿಲಯ (4ಡಿ ಹಾಸ್ಟೆಲ್) ಸಂಕೀರ್ಣದಲ್ಲಿ ಗುರುವಾರ 78ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ ಕಳೆ ಕಟ್ಟಿತ್ತು.

ಅಂತಿಮ ವರ್ಷದ ವಿದ್ಯಾರ್ಥಿನಿ ಕು.ಭವ್ಯಶ್ರೀ ಅವರು ತಮ್ಮ ಕೈಯಿಂದ ಬಿಡಿಸಿ ವಸತಿ ನಿಲಯಕ್ಕೆ ಕಾಣಿಕೆಯಾಗಿ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಲಾ ಕೃತಿಯನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ರಂಜೋಳಕರ್ ಅವರು ಅನಾವರಣಗೊಳಿಸಿದರು. ಅಲ್ಲದೆ ಉತ್ತಮವಾಗಿ ಚಿತ್ರ ಬಿಡಿಸಿದ್ದಕ್ಕಾಗಿ ವಿದ್ಯಾರ್ಥಿನಿಗೆ ವೈಯಕ್ತಿಕ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಇದಕ್ಕು ಮುನ್ನ ವಸತಿ ನಿಲಯದಲ್ಲಿ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕಳೆದ 2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಡಿಸ್ಟ್ರಿಂಕ್ಷನ್‌ನಲ್ಲಿ ತೇರ್ಗಡೆಯಾದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ವಾರ್ಡನ್‌ಗಳಿಂದ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಸದಾನಂದ ಹಾಗರಗಿ, ವಸತಿ ನಿಲಯದ ವಾರ್ಡನ್‌ಗಳಾದ ಲಕ್ಣ್ಮೀ ಕೋರೆ, ಶಶಿಕಲಾ ಪೂಜಾರಿ, ಗಂಗಮ್ಮ ಬಂಡೆನವರು, ಜ್ಯೂನಿಯರ್ ವಾರ್ಡನ್‌ಗಳಾದ ಗೌರಮ್ಮ ಎಸ್., ಜ್ಯೋತಿ ಬಸವರಾಜ ಸೇರಿದಂತೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here