ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಮುಖಂಡರು ಸಂಭ್ರಮ ಸಡಗರದಿಂದ ಆಚರಿಸಿದರು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಧ್ವಜಾರೋಹಣ ವನ್ನು ನೆರವೇರಿಸಿ,ಸುಮಾರು 200 ವರ್ಷಗಳ ಕಾಲ ನಮ್ಮ ತಾಯ್ನಾಡನ್ನು ಆಳಿದ ಬ್ರಿಟಿಷ್ ರಿಗೆ ಹೊಡೆದು ಹೊಡಿಸಿದ ಭಯಾನಕ ದೃಶ್ಯ ಈ ದಿನ ನಮ್ಮ ಕಣ್ಣಂಚಿನಲ್ಲಿ ನೀರು ತರಿಸುತ್ತದೆ ಎಂದು ಮಾತನಾಡಿದರು.
ಅದರ ಜೊತೆಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಖುಷಿ ಎಲ್ಲರ ಮನಗಳಿಗೆ ಮನೆಮಾಡಿದೆ.
ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ನೀಡಲು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತಮ್ಮ ಜೀವವನ್ನೇ ಬಲಿಕೊಟ್ಟು ನಮಗೆ ಶಾಂತಿ ಮತ್ತು ಸಂತೋಷದ ಭೂಮಿಯನ್ನು ನೀಡಿದ್ದಾರೆ,ಇಲ್ಲಿ ನಾವು ಇಡೀ ರಾತ್ರಿ ಭಯವಿಲ್ಲದೆ ಮಲಗಬಹುದು ಮತ್ತು ಇಡೀ ದಿನವನ್ನು ಆನಂದದಿಂದ ಇರಬಹುದು.ನಮ್ಮ ದೇಶ ತಂತ್ರಜ್ಞಾನ, ಶಿಕ್ಷಣ, ಕ್ರೀಡೆ, ಹಣಕಾಸು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಪರಮಾಣು ಶಕ್ತಿಯಿಂದ ಸಮೃದ್ಧವಾಗಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಒಲಿಂಪಿಕ್ಸ್, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಾವು ಎಲ್ಲದರಲ್ಲೂ ಮುಂದುವರಿಯುತ್ತಿದ್ದೇವೆ.
ಇಂದು ಇಡೀ ಜಗತ್ತು ಎರಡು ಶತಮಾನದ ಆಳ್ವಿಕೆಗೆ ಒಳಪಟ್ಟಿದ ದೇಶದ ಅಭಿವೃದ್ಧಿ ಕಂಡು ಬೇರಗಾಗುತ್ತಿದೆ.
ಇಂತಹ ವಿಕಸಿತ ಭಾರತಕ್ಕೆ ಬುನಾದಿ ಹಾಕಿದ ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ವಿನಾಯಕ ದಾಮೋದರ ಸಾವರ್ಕರ, ಭಗತ್ ಸಿಂಗ್, ಮಂಗಲ ಪಾಂಡೆ,ಚಂದ್ರಶೇಖರ ಆಜಾದ್, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ ಬಿ ಆರ್ ಅಂಬೇಡ್ಕರ್ ಅವರಂತಹ ಮಹಾನ್ ಹೋರಾಟಗಾರರಿಗೆ
ನೆನೆಯುವುದು ಮತ್ತು ವಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದರಂತೆ ಮನೆಮನೆಗಳಲ್ಲಿ ತಿರಂಗಾ ಅಭಿಯಾನದ ಮೂಲಕ ಸ್ವಾತಂತ್ರ್ಯ ಹೋರಾಟಗಾರಿಗೆ ಗೌರವಿಸಿದ್ದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.
ಪಕ್ಷದ ಹಿರಿಯ ಮುಖಂಡರಾದ *ಬಸವರಾಜ ಪಂಚಾಳ* ಮಾತನಾಡಿ ಭಾರತವು ಶ್ರೀಮಂತ ಮತ್ತು ಅದ್ಭುತವಾದ ಇತಿಹಾಸವನ್ನು ಹೊಂದಿದ್ದು, ನಮ್ಮ ದೇಶದ ವೀರರ ಅಭೂತಪೂರ್ವ ಶೌರ್ಯ, ಧೈರ್ಯ, ತ್ಯಾಗ, ತಪಸ್ಸು, ಯುದ್ಧಗಳು ಮತ್ತು ವಿಜಯಗಳ ಸಾಹಸ ಕಥೆಗಳಿಂದ ತುಂಬಿದೆ
ಭಾರತ ಮಾತೆಯ ಅಂತಹ ಮಹಾನ್ ಪುತ್ರರ ಕೊಡುಗೆಗಳು ತಲೆತಲಾಂತರದವರೆಗೆ ಸ್ಫೂರ್ತಿಯಾಗಿ ನಮ್ಮೆಲ್ಲರಿಗೆ ಹೆಮ್ಮೆಯ ಭಾವವನ್ನು ಮೂಡಿಸಿದೆ ಎಂದು ಹೇಳಿದರು.
ಮುಖಂಡರಾದ ರಮೇಶ ಕಾರಬಾರಿ,ವಿಠಲ ನಾಯಕ
ಮಹಾತ್ಮಾ ಗಾಂಧಿ, ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.
ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್ ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ,ಹರಿ ಗಲಾಂಡೆ,ಭೀಮಶಾ ಜಿರೋಳ್ಳಿ,ತುಕಾರಾಮ ರಾಠೋಡ,ಅರ್ಜುನ ಕಾಳೆಕರ್,ಕಿಶನ ಜಾಧವ,ಅಂಬದಾಸ ಜಾಧವ,ಆನಂದರಾವ ಡೌವಳೆ, ಸೋಮು ಚವ್ಹಾಣ,ಹಣಮಂತ ಚವ್ಹಾಣ,ರವಿ ಕಾರಬಾರಿ,ಮೋಹನ ಪವಾರ, ರಾಜು ಪವಾರ,ಪ್ರಕಾಶ ಪುಜಾರಿ,ಅಯ್ಯಣ್ಣ ದಂಡೋತಿ,ನಾಮದೇವ ಚವ್ಹಾಣ, ಮಲ್ಲಿಕಾರ್ಜುನ ಸಾತಖೇಡ, ಆನಂದ ಇಂಗಳಗಿ,ಭಾರತ ರಾಠೋಡ,ಪ್ರೇಮ ರಾಠೋಡ, ಮಹೇಂದ್ರ ಕುಮಾರ ಪುಜಾರಿ,ಹೀರಾ ನಾಯಕ,ಸಿದ್ದೇಶ್ವರ ಚೊಪಡೆ, ಸಚಿನ್ ಡೌವಳೆ,
ಯಂಕಮ್ಮ ಗಾಡಗಾಂವ,ನಿರ್ಮಲ ಇಂಡಿ,ಶರಣಮ್ಮ ಯಾದಗಿರಿ,ದೇವಕ್ಕಿ ಪುಜಾರಿ, ಉಮಾಬಾಯಿ ಗೌಳಿ,ಅನ್ನಪೂರ್ಣ ದೊಡ್ಡಮನಿ, ಮಹೇಶ್ ಚವ್ಹಾಣ, ಪ್ರೇಮ ತೆಲ್ಕರ,ಹಿರಾಸಿಂಗ್ ರಾಠೋಡ, ಸೋಮು ಸಿಂಗ ಚವ್ಹಾಣ,ರಾಜು ನಾಯಕ ಸೇರಿದಂತೆ ಇತರರು ಇದ್ದರು.