ಶಹಾಪುರ : ಭಾರತ ಸ್ವಾತಂತ್ರ್ಯ ಸಂಗ್ರಾಮದ ಸೇನಾನಿಗಳ ಬದುಕು ಇಂದಿನ ಪ್ರತಿಯೊಬ್ಬ ಯುವಕರಿಗೂ ಮಾದರಿಯಾಗಿವೆ ಎಂದು ನೂತನ ಸಗರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ಶಿದ್ರಾ ಹೇಳಿದರು.
ಸಗರದ ಯುಕೆಪಿ ಕ್ಯಾಂಪ್ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು,ದೇಶದ ಗಡಿ ಕಾಯುವ ಸೈನಿಕರನ್ನ,ಅನ್ನ ನೀಡುವ ರೈತರನ್ನ,ಕಾರ್ಮಿಕ ವರ್ಗದವರನ್ನು ಗೌರವಿಸುವ ಗುಣಗಳು ಪ್ರತಿಯೊಬ್ಬರಲ್ಲೂ ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಮಾತನಾಡಿ, ದೇಶ ಮತ್ತು ದೇಶಾಭಿಮಾನ ಎದಿಯೊಳಗೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಎಂಬ ಪದ ಅರ್ಥ ಪಡೆಯುತ್ತದೆ.ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಭಾರತೀಯ ಪ್ರತಿಯೊಬ್ಬ ಪ್ರಜೆಯ ಪಾಲುಗಾರಿಕೆಯ ಪಾತ್ರ ಬಹುಮುಖ್ಯವಾಗಿದೆ ಎಂದು ನುಡಿದರು,
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನಾಗಣ್ಣ ಜಾಯಿ, ಮಲ್ಲಣ್ಣ ವಮ್ಮಾ,ಭೀಮಣ್ಣ ಹೂಗಾರ,ಭೀಮಣ್ಣ ಮೊಕಾಶಿ, ಸಿದ್ದಯ್ಯ ಪುರಾಣಿಕಮಠ,ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳು ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,