ಕಲಬುರಗಿ : ಸದೃಢ ರಾಷ್ಟ್ರದ ನಿರ್ಮಾಣಕ್ಕೆ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ದೀಕ್ಷೆ ತೊಡುವ ದಿನವೇ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ಪ್ರತಿಯೊಬ್ಬ ಭಾರತೀಯರು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ ಮನ್ನೂರ ಹೇಳಿದ್ದರು.
ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ನಮ್ಮ ಭಾರತ. ಇಂಥ ದೇಶದ ರಕ್ಷಣೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಹಾಗೂ ದೇಶದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ದೇಶದಲ್ಲಿ ಅನೇಕ ಮಹನೀಯರು ತ್ಯಾಗ, ಬಲಿದಾನ ಮಾಡಿದ ಪರಿಣಾಮ ಭಾರತ ದೇಶ ಸ್ವಾತಂತ್ರ್ಯಗೊಂಡಿದ್ದು, ಇದನ್ನು ಉಳಿಸಿಕೊಳ್ಳುವದು ಅವಶ್ಯವಿದೆ ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಅಧ್ಯಕ್ಷರಾದ ಬಾಬುಮಿಯ್ಯ .ಐ ಮನ್ನೂರ , ಡಾ. ಮುಜಮಿಲ್, ಡಾ. ಸತೀಶ, ಡಾ. ಶ್ರೀಕಾಂತ , ಡಾ.ಫೈಜೂಲ್ ವಿಖಾಸ, ಡಾ. ರಸೂಲ್, ಡಾ. ಮತೀನ, ಮಹ್ಮದ ಇಸ್ಮಾಯಿಲ್ ,ಮುಬೀನ ಆಹ್ಮದ್ , ವಿಕ್ಕಿ ಪವಾರ, ಶೋಭಾ ಮಠಪತಿ ಹಾಗೂ ಎಲ್ಲಾ ವರ್ಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಶ್ಚಿಮ ಬಂಗಳಾದಲ್ಲಿ ಆರ್.ಜಿ ಮೇಡಿಕಲ್ ಕಾಲೇಜ ಹಾಗೂ ಆಸ್ಪತ್ರೆಯಲ್ಲಿ ಕಾರ್ಯನೀರತ ವೈದ್ಯೆ ಮೇಲೆ ನಡೇದ ಅತ್ಯಾಚರ ಹಾಗೂ ಹತ್ಯೆಗೋಳಗಾದ ವೈದ್ಯೆಯ ಶಾಂತಿಗಾಗಿ ಮನ್ನೂರ ಆಸ್ಪತ್ರೆಯ ವತಿಯಿಂದ 2 ನಿಮಿಷ ಮೌನಾಚಾರಣೆ ನೇರವೇರಿಸಲಾಯಿತು