ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಧಾರ್ಮಿಕ ದತ್ತಿ ಇಲಾಖೆಯ ರಟಕಲ್ (ರೇವಗ್ಗಿ) ಶ್ರೀ ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಪಲ್ಲಕ್ಕಿ ಉತ್ಸವದಲ್ಲಿ ಸೋಮವಾರ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಕರ್ನಾಟಕದ ಮೂಲೆ ಮೂಲೆಯಿಂದ ಲಕ್ಷೋಪಲಕ್ಷ ಜನಸಾಗರವೇ ಹರಿದು ಬಂದಿತ್ತು.
ಈ ಸಂದರ್ಭದಲ್ಲಿ ಭಕ್ತಾದಿಗಳು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ತಮ್ಮ ಹರಕೆ ತೀರಿಸಿ ರೇವಣಸಿದ್ದೇಶ್ವರ ಮಹಾರಾಜ ಕೆ ಜೈ ಅನ್ನುತ್ತ ಉತ್ತತ್ತಿ ಬಾಳೆಹಣ್ಣು ಸಮರ್ಪಣೆ ಮಾಡಿ ರೇವಣಸಿದ್ದರ ಭಕ್ತಾದಿಗಳು ಹರ್ಷ ವ್ಯಕ್ತಪಡಿಸಿದರು.
ವೀರಣ್ಣ ಗಂಗಾಣಿ ರಟಕಲ್, ರಾಜು ಧರಿ ಗುಡದಾ, ಶರಣಬಸಪ್ಪ ಮಾಮ್ ಶೆಟ್ಟಿ, ಶಿವರಾಜ್ ಪಾಟೀಲ್ ಗೋಣಿ, ನಾಗರಾಜ್ ಬಿರಾದಾರ್, ರೇವಗಿ ರೇವಣಸಿದ್ದ ಚೆಂಗಟ್ಟಿ, ಮುಕರಂಭ ರೇವ ಶೆಟ್ಟಿ ಪಾಟೀಲ್ ಗೋಣಿ, ಮಂಜು ಗೌಡ ಕಂದಗೋಳ ಸೇರಿದಂತೆ ಅನೇಕ ಲಕ್ಷಾಂತರು ಭಕ್ತಾದಿಗಳು ಆಗಮಿಸಿದರು.