ಕಲಬುರಗಿ: ಜಿಲ್ಲೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸ್ಮಶಾನ ಭೂಮಿ ಇರುವುದಿಲ್ಲ, ಬಹುತೇಕರು ತಮ್ಮ ತಮ್ಮ ಹೊಲಗಳಲ್ಲಿ ಶವ ಸಂಸ್ಕಾರ ಮಾಡುತ್ತಿದ್ದಾರೆ, ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಎಸ್‍ಸಿ/ಎಸ್ಟಿ ಜನಾಂಗ ಒಗ್ಗಟು ಸಮಿತಿ ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಸ್ವಾತಂತ್ರ್ಯ ಸಿಕ್ಕು 78 ವರ್ಷ ಗತಿಸಿದರೂ ಕಲಬುರಗಿ ಜಿಲ್ಲೆಯಾದ್ಯಂತ ಸುಮಾರು ನಗರ ಹಾಗೂ ಹಳ್ಳಿ ಗ್ರಾಮಗಳಲ್ಲಿ ದಲಿತ ಸಮುದಾಯ ಎಸ್.ಸಿ. / ಎಸ್.ಟಿ ಜನಾಂಗದವರು ಸತ್ತರೆ ಅವರ ಪ್ರಾರ್ಥಿವ ಶರೀರ ( ಶೆವ) ವನ್ನು ಹೂಳಲಿಕ್ಕೆ ತುಸು ಜಾಗ ಇಲ್ಲ. ಜಮೀನು ಇದ್ದವರು ತಮ್ಮ ಸ್ವಂತ ಹೊಲದಲ್ಲಿ ಹೂಳುತ್ತಾರೆ ಹೊಲ ಇಲ್ಲದವರು ರಸ್ತೆ ಬದಿಯಲ್ಲಿ, ನಾಲಾದಲ್ಲಿ ಹೂಳುತ್ತಿದ್ದಾರೆ, ಇದು ಸುಮಾರು ವರ್ಷದಿಂದ ನಡೆಯುತ್ತಿದೆ. ಕಲಬುರಗಿ ಜಿಲ್ಲೆಯಾದ್ಯಂತ ನಗರ ಹಳ್ಳಿ, ಗ್ರಾಮಗಳಲ್ಲಿ ಹೂಳಲಿಕ್ಕೆ ಎಲ್ಲೇಲ್ಲಿ ಜಾಗ ಇರುವುದಿಲ್ಲ. ಅಂಥ ಸ್ಥಳಗಳಲ್ಲಿ ಸರಕಾರದಿಂದ ಜಾಗ ಮಂಜೂರಿ ಮಾಡಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎಸ್.ಜಿ.ಭಾರತಿ, ಮಹೇಶ, ಗುಂಡಪ್ಪ ಸಿಂಗೆ, ಚಂದ್ರಕಾಂತ ಕಟ್ಟಿ, ರಂಜಿತ ಗಾಯಕವಾಡ, ನಾಗಪ್ಪ ಆರ್, ಸಹದೇವ ನಂದೂರ, ಶಿವು ಸಿಂಗೆ, ಭೀಮರಾವ ಗೌರ ಇದ್ದರು.