ಸಚೀನ್ ಫರತಾಬಾದ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗೆ ಮನವಿ

0
40

ಕಲಬುರಗಿ: ಪ್ರತಿ ವರ್ಷ ಆಚರಣೆ ಮಾಡುತ್ತಾ ಬರುತ್ತಿರುವ ಸೆಪ್ಟೆಂಬರ್ 17 ರಂದು ಕಲ್ಯಾಣ-ಕರ್ನಾಟಕ ವಿಮೋಚನೆ ದಿನಾಚರಣೆ ದಿನದಂದು ಸರಕಾರಿ ರಜೆ ಘೋಷಣೆ ಮಾಡಬೇಕು ಹಾಗೂ ಈ ದಿನದಂದು ಕೇವಲ ಉಕ್ಕಿನ ಮನುಷ್ಯನಾದ ಸರ್ದಾರ ವಲ್ಲಭಬಾಯಿ ಪಟೇಲ್ ಭಾವಚಿತ್ರವನ್ನು ಮಾತ್ರ ಇಟ್ಟು ಪೂಜೆ ಮಾಡುತ್ತಿದ್ದು, ಈ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವಣ್ಣ ನವರ ಭಾವಚಿತ್ರಗಳನ್ನು ಇಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಅತ್ಯಂತ ಹಿಂದುಳಿದ ಪ್ರದೇಶವೆಂದು ಹಣೆಪಟ್ಟಿಕಟ್ಟಿಕೊಂಡಿರುವ ಈ ಭಾಗಕ್ಕೆ ಉಕ್ಕಿನ ಮನುಷ್ಯ ಖ್ಯಾತಿ ಪಡೆದ ದಿವಂಗತ ಸರ್ದಾರ ವಲ್ಲಭಬಾಯಿ ಪಟೇಲ್ ರವರು ನಿಜಾಮರ ಸಂಗಡ ಹೋರಾಟ ಮಾಡಿ. ಭಾಗವನ್ನು ನಿಜಾಮರಿಂದ ಬಿಡಿಸಿಕೊಂಡು ಸ್ವಾತಂತ್ರ್ಯ ನೀಡುವಲ್ಲಿ ಅವರ ಕೊಡುಗೆ ಅಪಾರವಾದದ್ದು. ಇಡಿ ಭಾರತ ದೇಶಕ್ಕೆ 1947 ರಲ್ಲಿ ಸ್ವಾತಂತ್ರ ಸಿಕ್ಕಿರುತ್ತದೆ. ಆದರೆ ಹೈದ್ರಾಬಾದ ಕರ್ನಾಟಕ ಭಾಗಕ್ಕೆ 1948 ರಲ್ಲಿ ಅಂದರೆ ಒಂದು ವರ್ಷದ ನಂತರ ತಡವಾಗಿ ಸ್ವಾತಂತ್ರ ದೊರಕಿತು.

Contact Your\'s Advertisement; 9902492681

ಈಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ದಾರ ವಲ್ಲಭಬಾಯಿ ರವರ ಭಾವಚಿತ್ರ ಮಾತ್ರ ಇಟ್ಟು ಹೂವಿನ ಮಾರ್ಲಾಪಣೆ ಮಾಡತ್ತಾ ಕರ್ನಾಟಕ ಸರಕಾರ ಬಂದಿರುತ್ತದೆ. ಈಗ ಸದರಿ ಶ್ರೀ ಸರ್ದಾರ ವಲ್ಲಭಬಾಯಿ ಪಟೇಲ್ ರವರ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವಣ್ಣನವರ ಭಾವಚಿತ್ರಗಳನ್ನು ಇಟ್ಟುಕೊಂಡು ಮಾರ್ಲಾಪಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಬೇಕೆಂದು ತಮ್ಮಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ತಮ್ಮಲ್ಲಿ ಮನವಿ ಮಾಡಿದೆ.

ಆದರೆ ಹೈದ್ರಾಬಾದ ಕರ್ನಾಟಕ ಭಾಗದ ಇತಿಹಾಸವನ್ನು ಯಾವುದೇ ಪಠ್ಯಪುಸ್ತಕದಲ್ಲಿ ಇಲ್ಲಿಯವರೆಗೆ ಅಳವಡಿಸಿರುವುದಿಲ್ಲ. ಈಗಿನ ಸರ್ಕಾರ ಮುಂಬರುವ ಸೇಪ್ಟಂಬರ್ 17 ಕಲ್ಯಾಣ ಕರ್ನಾಟಕ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು. ಹಾಗೂ ನಮ್ಮ ಭಾಗದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಕ್ಷಯ, ಅಣವೀರ ಪಾಟೀಲ, ರವಿ ಸಜ್ಜನ್, ಬಸ್ಸು, ಅಜಯ, ಪ್ರವೀಣ ಸಿಂಧೆ, ಅಂಬು ಮಸ್ಕಿ, ಸಾಯಿಕುಮಾರ ಸಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here