ಕಲಬುರಗಿ: ಮಾಜಿ ಸಚಿವರೂ ಆದ ಹಾಲಿ ಶಾಸಕ, ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ ಅವರ ಜನ್ಮದಿನವನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ಕೊಡುವ ಮೂಲಕ ಎಂ.ಬಿ.ಪಾಟೀಲ ಅಭಿಮಾನಿಗಳ ಬಳಗವು ಅರ್ಥಪೂರ್ಣವಾಗಿ ಆಚರಿಸಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶರಣ ಚಿಂತಕ ಪ್ರೊ.ನಾಗರಾಜ ಕಾಮಾ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಕಂಕಣಬದ್ಧರಾದ ಎಂ.ಬಿ.ಪಾಟೀಲರು ಬಸವತತ್ವದ ಒಬ್ಬ ಪಕ್ಕಾ ಅನುಯಾಯಿಯಾಗಿದ್ದಾರೆ. ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಅವರು ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರ ಸೇವೆ ಈ ನಾಡಿಗೆ ಮುಖ್ಯಮಂತ್ರಿಯಾಗಿ ಸಲ್ಲಿಸಲೆಂದು ಇದೇ ಸಂದರ್ಭದಲ್ಲಿ ಹಾರೈಸಿದರು.
ಬಳಗದ ಸತೀಶ ಸಜ್ಜನ್ ಹಾಗರಗುಂಡಗಿ, ಭೀಮಣ್ಣಗೌಡ ಪರಗೊಂಡ, ವೀರೇಶ ಕಲಕೋರಿ, ರಾಜಶೇಖರ ಯಂಕಂಚಿ , ಶಿವಶರಣ ದೇಗಾಂವ, ಚಂದ್ರಶೇಖರ ಮಲ್ಲಾಬಾದಿ, ಶಶಿಕಾಂತ ಸರಡಗಿ, ಶಶಿಕಾಂತ ಪಸಾರ, ಮಲ್ಲಿಕಾರ್ಜುನ ಬಳಗಾನೂರ, ರಮೇಶ ಧುತ್ತರಗಿ, ವಿಜಯಕುಮಾರ ತೇಗಲತಿಪ್ಪಿ, ಎಸ್.ಎನ್.ಪಾಟೀಲ, ಅಯ್ಯಣ್ಣಗೌಡ ಪಾಟೀಲ, ಶಿವಾನಂದ ಡೋಮನಾಳ, ಹಣಮಂತರಾಯ ಪಾಟೀಲ ಕುಸನೂರ, ರವೀಂದ್ರ ಶಾಬಾದಿ, ಮಹಾಂತೇಶ ಕಲಬುರಗಿ, ಪ್ರಭುಲಿಂಗ ಮಹಾಂವಕರ್, ಸುನೀಲ್ ಹುಡಗಿ, ಆರ್.ಜಿ.ಶಟಗಾರ, ನಾಗೇಂದ್ರಪ್ಪ ಮಾಡ್ಯಾಳೆ, ಪ್ರಸನ್ನ ವಾಂಜರಖೇಡೆ, ಶಿವಬಸಪ್ಪ ಟಕ್ಕಳಕಿ, ಆದಪ್ಪ ಬಗಲಿ, ಅಯ್ಯಣ್ಣ ನಂದಿ, ವಿಶ್ವನಾಥ ಪಾಟೀಲ ಗೌನಳ್ಳಿ, ಮಹಾದೇವ ಪಾಟೀಲ, ವೈಜನಾಥ ತಾಂಬೋಳೆ, ಅಶೋಕ ಘೂಳಿ, ಮಹಾದೇವ ಬಡಾ, ಬಸವರಾಜ ಮೊರಬದ, ಶಿವರಾಯ ಬಳಗಾನೂರ, ಡಾ.ಬಾಬುರಾವ ಶೇರಿಕಾರ, ವೀರಸಂಗಪ್ಪ ಸುಲೇಗಾಂವ ಸೇರಿ ಅನೇಕರು ಉಪಸ್ಥಿತರಿದ್ದರು.