ರೈಲು ಹಳಿಯ ಮೇಲೆ ಪ್ರವಾಹ: ಬೀದರ್- ಕಲಬುರ್ಗಿ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

0
55

ಕಲಬುರಗಿ: ಕಳೆದ ಎರಡು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ರೈಲು ಹಳಿಗಳ ಮಧ್ಯೆ ಪ್ರವಾಹದ ರೂಪದಲ್ಲಿ ನೀರು ಹರಿಯುತ್ತಿರುವುದರಿಂದ ಒಂದು ದಿನದ ಮಟ್ಟಿಗೆ ಬೀದರ್- ಕಲಬುರ್ಗಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಜಿಲ್ಲೆಯ ಹಲವೆಡೆ ಕಳೆದ ಎರಡು ದಿನಗಳಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಗುಡ್ಡದಿಂದ ಮಳೆ ನೀರು ಪ್ರವಾಹದ ರೂಪದಲ್ಲಿ ಹರಿದುಬರುತ್ತಿರುವುದರಿಂದ ಕಲಬುರ್ಗಿ- ಬೀದರ್ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Contact Your\'s Advertisement; 9902492681

ಮರಗುತ್ತಿ ರೈಲ್ವೆ ಸುರಂಗ ಮಾರ್ಗದ ಮೇಲೆ ಗುಡ್ಡದಿಂದ ನೀರು ಹರಿದುಬರುತ್ತಿದೆ. ಸುರಂಗಕ್ಕೆ ಹೊಂದಿಕೊಂಡು ಕಟ್ಟಲಾದ ತಡೆಗೋಡೆ ಕುಸಿತಗೊಂಡು ರೈಲ್ವೆ ಹಳಿಗಳ ಮೇಲೆ ಕಲ್ಲುಗಳು ಬಿದ್ದಿವೆ. ಹಳಿಯುದ್ದಕ್ಕೂ ನೀರು ಪ್ರವಾಹದಲ್ಲಿ ಹರಿಯುತ್ತಿರುವುದರಿಂದ ಒಂದು ದಿನದ ಮಟ್ಟಿಗೆ ಬೀದರ್- ಕಲಬುರ್ಗಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here