ಪ್ರಾದೇಶಿಕ ಕೇಂದ್ರದಲ್ಲಿ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ; ಪುನಶ್ಚೇತನ ತರಬೇತಿ

0
33

ಕಲಬುರಗಿ: ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಮೈಸೂರು & ಪ್ರಾದೇಶಿ ಕೇಂದ್ರ, ಅಧ್ಯಯನ ಪೌಂಡೇಶನ್‌, ಶಿಕ್ಷಣ ಟ್ರಸ್ಟ್‌, ಎಸ್.ಎಮ್.ಸಿ.ಎ. ಮತ್ತು ಬರ್ಡ ವ್ಯೂ ಸ್ವಯಂ ಸೇವಾ ಸಂ‍ಸ್ಥೆಗಳು ಸಹಯೋಗದಲ್ಲಿ ಗ್ರಾಮ ಪಂಚಾಯತಿಯ ಅರಿವು ಕೇಂದ್ರದ ಮೇಲ್ಚಿಚಾರಕರಿಗೆ ಎರಡು ದಿನದ ವಸತಿ ಸಹಿತ ತರಬೇತಿ ಆಯೋಜಿಸಲಾಗಿತ್ತು. ತರಬೇತಿ ಕಾ‍ರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಕಚೇರಿಯ ಬೋಧಕಾರದ ಕು.ದೀಪ ಎನ್. ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕು.ವರ್ಷ ವಿಜಯಕುಮಾರ, ಶ್ರೀಮತಿ ಸವಿತ ಸಿ.,  ಅಭಿಶೇಕ್‌ ಕೃಷ್ಣ ಗೋಪಾಲ್‌, ಶ್ರೀ ಕಿರಣ ರವರು ಆಗಮಿಸಿ ವಿವಿಧ ವಿಷಯಗಳ ಕುರಿತು ವಿಷಯ ಮಂಡನೆ ಮಾಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು ಸ್ವಾಗತಿಸಿದರು, ಡಾ.ರಾಜು ಕಂಬಳಿಮಠ, ನಿರೂಪಿಸಿದರು, ತರಬೇತಿಯಲ್ಲಿ ಆಡಳಿತ ಮತ್ತು ಲೆಕ್ಕಾಧಿಕಾರಿಗಳಾದ ಕು.ಸಾಕ್ಷಿ ಪಾಟೀಲ್‌, ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ, ಸಿಬ್ಬಂಧಿಗಳಾದ ಅರ್ಚನ ಪಾಟೀಲ್‌ ಅಶ್ವೀನಿ ಪೂಜಾರಿ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here