ಕಲಬುರಗಿ: ಮುತ್ತೈದೆ ಕುರುಹು ಪಂಚಪೀಠಗಳ ಸಂಕೇತ ಅಂದು ದಾನಮ್ಮ ಮತ್ತು ಸೋಮನಾಥರ ಮದುವೆಯನ್ನು ಪಂಚ ಕಳಸಗಳನ್ನು ಪಂಚಾಚಾರ್ಯರ ಕುರುಹುವನ್ನ ಸಮಾಜಕ್ಕೆ ತಿಳಿಸಿದರು ಅದರಂತೆ ಗಂಗಾನಗರದ ಹನುಮಾನ್ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಗುಡ್ಡಾಪುರ ದಾನಮ್ಮ ದೇವಿಯ ಪುರಾಣದ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಶಾಸ್ತ್ರೋತ್ತವಾಗಿ ಜರುಗಿತು.
ಹಸಿರು ಬಳೆ ರಂಭಾಪುರಿ ಪೀಠದ ಕುರುಹು ,ಕುಂಕುಮ ಉಜ್ಜಯಿನಿ ಪೀಠದ ಕುರುಹು,ತಾಳಿ ಮಣಿ ಕೇದಾರ ಪೀಠದ ಕುರುಹು,ಕಾಲುಂಗುರ ಶ್ರೀಶೈಲ ಪೀಠದ ಕುರುಹು , ಮೂಗುಬೊಟ್ಟು ತಾಳಿ ಕಾಶಿ ಪೀಠದ ಕುರುಹುಗಳು ಇಂದಿಗೂ ಸದಾವಕಾಲ ಮುತ್ತೈದೆಯರು ಐದು ಮುತ್ತುಗಳನ್ನು ಧರಿಸಿರಬೇಕು ಅವರಿಗೆ ಮುತ್ತೈದೆ ಎಂದು ಕರೆಯುತ್ತಾರೆ. ಎಂದು ಪುರಾಣ ಪ್ರವಚನ ಪಂಡಿತರಾದ ಶ್ರೀ ವೆ.ಮೂ. ಸಿದ್ದೇಶ್ವರ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಸುಂಟನೂರ ಪುರಾಣದೊಳಗೆ ತಿಳಿಸಿದರು.
ನಗರದ ಗಂಗಾನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸಮಿತಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಾಜಿ ಉಪ ಮಹಾ ಪೌರರಾದ ಶ್ರೀಮತಿ ನಾಗವೇಣಿ, ತಿಪ್ಪಣ್ಣಪ್ಪ ಕಮಕನೂರ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದತ್ತಾತ್ರೇಯ ಹಾಸಿಲ್ಕರ್, ಭೀಮರಾವ್ ಕಟ್ಟಿಮನಿ, ದೇವಿಂದ್ರಪ್ಪ ಮಾಸ್ಟರ್, ಸಿದ್ದಣ್ಣ ಬಳೂರ್ಗಿ, ಚಂದ್ರಶೇಖರ್ ಶಿಲ್ಪಿ ಕಕ್ಕೇರ, ಭಾಗಣ್ಣ ಬಂದರ ವಾಡ, ಬಸವರಾಜ್ ಚಿನಿ ವಾರ, ಜಗನ್ನಾಥ್ ಪೂಜಾರಿ, ಅಣ್ಣಪ್ಪ ಜಮಾದಾರ್, ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಬಸಂತ ಬಾಯಿ ಡಿ. ಅಕ್ಕಿ.ಅಮೃತ್ ಎಚ್. ಡಿಗ್ಗಿ, ಅನಿಲ್ ಕೂಡಿ,ಶಾಂತಪ್ಪ ಕೂಡಿ, ರಾಯಪ್ಪ ಹೋನಗುಂಟಿ, ವಿಜಯಕುಮಾರ್ ಹದಗಲ್, ಜಗದೇವಪ್ಪ ನಡುವಿನಹಳ್ಳಿ, ಶರಣಪ್ಪ ಗುಡುರ್,ಅಶೋಕ್ ಬಿದನೂರ್, ಶರಣು ಕೌಲಗಿ, ಮಲ್ಲು ಕೂಡಿ, ಶ್ರೀಕಾಂತ್ ಆಲೂರ್, ಬಾಬಾ ಸಾಹೇಬ್ ಕೂಡಿ, ಸಂತೋಷ್ ಹುಳಿಗೇರಿ ಉಪಸ್ಥಿತರಿದ್ದರು.
ಕಲಾವಿದರಾದ ಬಾಬುರಾವ್ ಕೋಬಾಳ ಮತ್ತು ಮಾಂತೇಶ ಹರವಾಳ್ ಇವರಿಂದ ಸಂಗೀತ ಜರುಗಿತು ಸುತ್ತಮುತ್ತಲಿನ ಬಡಾವಣೆ ಗಣ್ಯಮಾನ್ಯರು ಮಹಿಳೆಯರು ಮುದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.