ವಾಡಿ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆ ಯಲ್ಲಿ, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳು ಕೃಷ್ಣ ರಾಧೆಯರ ವೇಷಭೂಷಣ ದೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಈ ವೇಳೆ ಸೆಡಮ್ ನ ಈಶ್ವರಿ ವಿಶ್ವವಿದ್ಯಾಲಯ ಶಾಖೆಯ ರಾಜಯೋಗಿನಿ ಬಿಕೆ ಕಲಾವತಿ ಕೃಷ್ಣನ ಪ್ರತಿಮೆಗೆ ಪುಷ್ಷಾರ್ಚನೆ ಮಾಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಮಕ್ಕಳಿಗೆ, ಮನೆ ಮಂದಿಗೆಲ್ಲ ಸಡಗರ,ಪುಟ್ಟ ಮಕ್ಕಳಿಗೆ ಶ್ರೀಕೃಷ್ಣನ ವೇಷ ತೊಡಿಸಿ ಹೆತ್ತವರು ಸಂಭ್ರಮಿಸಿ ಶ್ರೀಕೃಷ್ಣ ಪರಮಾತ್ಮನನ್ನು ಆರಾಧಿಸುವ ಪವಿತ್ರ ಹಬ್ಬವಾಗಿದೆ ಎಂದರು.
ಶ್ರೀಕೃಷ್ಣನ ಎಂದರೆ ಮನದಲ್ಲಿ ಗೌರವ,ತ್ಯಾಗ ಮೂಡುವುದು. ಅವನು ಎಷ್ಟೇ ರಾಜರನ್ನು ಗೆದ್ದರೂ ಗದ್ದುಗೆ ಏರಲಿಲ್ಲ. ಕಂಸನನ್ನು ಕೊಂದು ಅವನ ತಂದೆ ಉಗ್ರಸೇನನಿಗೆ ಮಥುರಾ ಪಟ್ಟ ಕಟ್ಟಿದ. ಜರಾಸಂಧನನ್ನು ಕೊಂದು ಅವನ ಮಗ ಸಾಲ್ವನಿಗೆ ಪಟ್ಟಕಟ್ಟಿದ. ಸತ್ಯ ಧರ್ಮಮೀರಿದವರು ಬಂಧುಗಳಾದರೂ ಶಿಕ್ಷಾರ್ಹರು ಎಂಬ ನೀತಿಯನ್ನು ಮಾವ ಕಂಸ, ಭಾವ ಶಿಶುಪಾಲ, ಅಜ್ಜ ಮಾಗಧ ಮುಂತಾದವರನ್ನು ವಧಿಸುವ ಮೂಲಕ ತೋರಿಸಿದನು.
ಸುಧಾಮನ ಪ್ರಸಂಗ, ದ್ರೌಪದಿಯ ವಸ್ತ್ರಾಪಹರಣ ಸಂದರ್ಭ, ದೂರ್ವಾಸಾತಿಥ್ಯ ಸನ್ನಿವೇಶ, ಕುಬ್ಜೆಯ ಗೂನು ತಿದ್ದಿ ಮುದ್ದಾಗಿ ಮಾಡಿದ್ದು, ಧೃತರಾಷ್ಟ್ರನಿಗೆ ದಿವ್ಯದೃಷ್ಟಿ ನೀಡಿದ್ದು ಇವೆಲ್ಲವೂ ಅವರ ಚರಿತ್ರೆಯಲ್ಲಿ ಕಾಣುತ್ತವೆ.
ಇಂತಹ ಮಹಾಮಹಿಮನ ಜನ್ಮಸ್ಮರಣೆಯಲ್ಲಿ ಪಾಲ್ಗೊಂಡಿದ್ದ ನಾವೆಲ್ಲರೂ ಪುಣ್ಯವಂತರು.ಶ್ರೀಕೃಷ್ಣನು ಅಂದಕಾರದ ರಾತ್ರಿಯಲ್ಲಿ ಜನಿಸಿ ನಮ್ಮ ಬದುಕನ್ನು ಬೆಳಗಿಸಿದನು. ಈ ಪವಿತ್ರ ದಿನ ಎಲ್ಲರಿಗೂ ಪಾವನ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಈಶ್ವರಿ ವಿಶ್ವವಿದ್ಯಾಲಯದ ವಾಡಿ ಶಾಖೆಯ ರಾಜಯೋಗಿನಿ ಬಿಕೆ ಮಹಾನಂದ,ಬಿಕೆ ಸಂತೋಷ, ಇಂಧ್ರಾಬಾಯಿ ಪಾಟೀಲ,ಚಂದ್ರಕಲಾ ಗೌಡಪ್ಪನೂರ,ಪ್ರೆಮಾವತಿ ಕಾಶೆಟ್ಟಿ,ಸೀಮಾ ಅರಳಗುಂಡಗಿ,ಸಂಗೀತಾ ಯಾರಿ, ರಾಜೇಶ್ವರಿ ರಡ್ಡಿ ಸೇರಿದಂತೆ ಇತರರು ಇದ್ದರು.