ವಾಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ

0
38

ವಾಡಿ: ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಾಲ್ಕನೇ ಸೋಮವಾರ ಪಲ್ಲಕ್ಕಿ ಉತ್ಸವ ಭಕ್ತರ ಜೈ ಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಈ ವೇಳೆ ತೊನಸನಹಳ್ಳಿ ಅಲ್ಲಮ‌ ಪ್ರಭು ಸಂಸ್ಥಾನ ಮಠದ‌ ಪೂಜ್ಯ ಶ್ರೀ ಡಾ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗೂ ಶಿವ ಒಲಿದು ಬೇಡಿದನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ ಎಂದರು.

Contact Your\'s Advertisement; 9902492681

ಆಷಾಡ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನವ ನಕ್ಷತ್ರ ಆಕಾಶವನ್ನು ಆಳುತ್ತದೆ. ಆದ್ದರಿಂದ ಈ ಮಾಸಕ್ಕೆ ಶ್ರಾವಣ ಮಾಸ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸುವುದು ಎಂದರ್ಥ. ಹೀಗಾಗಿ ಈ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸಿ, ಶಿವನ ಕುರಿತಾದ ಪುರಾಣ,ಭಜನೆ ಹಾಗೂ ಪ್ರವಚನಗಳಲ್ಲಿ ಭಾಗಿಯಾಗಿ ಧ್ಯಾನ ಮಾಡಬೇಕು.

ಹೆಣ್ಣು ಕುಟುಂಬದ ಕಣ್ಣು ಎಂಬಂತೆ ,ಬಹಳಷ್ಟು ಜನ ಸಾಧಕರ ಅದ್ವಿತೀಯ ಸಾಧನೆಯ ಹಿಂದೆ ಒಂದಲ್ಲಾ ಒಂದು ವಿದವಾಗಿ ಅಂದರೆ ಮಾತೆಯಾಗಿ,ಪತ್ನಿ ಯಾಗಿ, ಸಹೋದರಿಯಾಗಿ,ಗೆಳತಿಯಾಗಿ ಹೆಣ್ಣಿನ ಪ್ರೇರಣೆ ಪ್ರಮುಖವಾಗಿರುವುದನ್ನು ನಾವು ಹಿಂದಿನಿಂದಲೂ ಕಾಣಬಹುದಾಗಿದೆ. ಮಹಾತ್ಮ ಗಾಂದೀಜಿ,ಛತ್ರಪತಿ ಶಿವಾಜಿ,ಸ್ವಾಮಿ ವಿವೇಕಾನಂದರು ಮುಂತಾದವರು ಅವರ ತಾಯಂದಿರಿಂದ ಪ್ರೇರಿತರಾದವರು ಆದ್ದರಿಂದ ಇಲ್ಲಿ ತಾಯಿಂದಿರ ಸಂಖ್ಯೆ ಹೆಚ್ಚಾಗಿದ್ದು ಶುಭ ಸಂಕೇತ ಮುನ್ಸೂಚನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಶರಣಗೌಡ ಚಾಮನೂರ, ಕಾರ್ಯದರ್ಶಿ ಬಸವರಾಜ ಕಿರಣಗಿ,ಭೀಮಶಾ ಜಿರೋಳ್ಳಿ, ಪರುತಪ್ಪ ಕರದಳ್ಳಿ,ಮಲ್ಲಣಗೌಡ ಗೌಡಪ್ಪನೂರ,ಚಂದ್ರಶೇಖರ ಪಾಟೀಲ,ಅಣ್ಣರಾವ ಪಸಾರ,
ವೀರಣ್ಣ ಯಾರಿ, ರಾಜಶೇಖರ ದೂಪದ,ಕಾಶಿನಾಥ ಅರಳಗುಂಡಗಿ,ಶಿವಪ್ಪ ಮುಂಡರಗಿ,ಗುರುಮೂರ್ತಿ ಸ್ವಾಮಿ,ಸತೀಶ್ ಸಾವಳಗಿ, ಅರುಣ ಪಾಟೀಲ,ವಿಶ್ವನಾಥ ಕಲ್ಲಶೆಟ್ಟಿ, ದತ್ತಾತ್ರೇಯ ಗೌಡಗಾಂವ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here