ಕಲಬುರಗಿ: ಇಲ್ಲಿನ ಅಫಜಲಪೂರ ತಾಲ್ಲೂಕಿನ ಗೊಬ್ಬುರ (ಕೆ) ಗ್ರಾಮದಲ್ಲಿರುವ ಶ್ರೀ ಬೆಳ್ಳಿಗುತಿ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಲೋಕದ ಒಳತಿಗಾಗಿ ನಡೆಸುತ್ತಿದ 21 ದಿನಗಳ ಉಪವಾಸ ಅನುಷ್ಠಾನ ಬುಧವಾರ ಕೊನೆಗೊಂಡಿತು.
ಕುಮಾರ ಬಸವರಾಜ (ಬಸ್ಸು) ಹಣಮಂತ ಸಜ್ಜನ ಎಂಬುವವರು ಅಗಸ್ಟ್ 8 ರಿಂದ ಬುಧವಾರದವರಿಗೆ, ಗ್ರಾಮದ ದೇವಸ್ಥಾನದ ಆವರಣದಲ್ಲಿ ಜೆಸಿಪಿ ಯಿಂದ ತೆಗ್ಗು ಗುಂಡಿಯಲ್ಲಿ ತೆಗೆದು ಅದರ ಆಳದಲಿ ಊಟ, ನೀರು, ಸೆವಿಸದೆ 21 ದಿನ ಉಪವಾಸ ಅನುಷ್ಠಾನ ಯಶಸ್ವಿಪುರೈಸಿದರು.
ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಜನರು ಅನುಷ್ಠಾನ ನಿರತ ಬಸವರಾಜ ಮುತ್ತಯ್ಯನವರ ದರ್ಶನ ಪಡೆದ ಮಹಿಳೆಯರು ಕಳಸ ಹೊತ್ತು ದೇವಸ್ಥಾನದಿಂದ ಹೊರಟು ಮೆರವಣಿಗೆ ಮುಖಾಂತರ ಮಳನಿ ಗ್ರಾಮಕ್ಕೆ ತೆರಳಿ ನಂತರ ಗೊಬ್ಬುರ (ಕೆ) ಗ್ರಾಮದಲ್ಲಿ ಡೊಳ್ಳು, ಹಲಗೆ ವಾದನಗಳು ಬಾರಿಸುತಾ ಮೆರವಣಿಗೆಯ ಮುಖಾಂತರ ಗ್ರಾಮದ ಜನರಿಗೆ ದರ್ಶನ ನೀಡಿದ್ದರು.