ಚಿಂಚೋಳಿ: ಕಾಂಗ್ರೆಸ್ ನಾಯಕರ ಅಸಹನೆಯ ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ಚಿಂಚೋಳಿ ಶುಗರ್ ಕಾರ್ಖಾನೆ ಸ್ಥಗಿತಗೊಳಿಸಿರುವುದು ಖಂಡನಿಯವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ತಕ್ಷಣ ಚಿಂಚೋಳಿ ಸಕ್ಕರೆ ಕಾರ್ಖಾನೆ ಆರಂಭಿಸಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಬಿಜೆಪಿ ಓಬಿಸಿ ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲು ಮರಗುತ್ತಿ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಜಾಧವ್ ಕುಟುಂಬ ಕೇವಲ ಚಿಂಚೋಳಿ ರೈತರ ಆರ್ಥಿಕವಾಗಿ ಸದೃಢವಾಗಬೇಕೆನ್ನುವ ಸದ್ದು ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿದ್ದು ಹೊರತು ಚುನಾವಣೆ ಬಂದಾಗ ಮಾತ್ರ ಪ್ರಯತ್ನಿಸಲಿಲ್ಲ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸಾಕಷ್ಟು ಉದ್ಯಮಿಗಳು ತಾಲೂಕಿಗೆ ಕರೆತಂದು ಸ್ಥಳ ಪರಿಸರ ನಡೆಸಿ ಅವರಿಗೆ ಮನವರಿಕೆ ಮಾಡಿಸಿ ಶಾಸಕ ಯತ್ನಾಳ್ ಅವರಿಗೆ ಕಾರ್ಖಾನೆ ಖರೀದಿಸಲು ಬೆಂಬಲ ನೀಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಾನು, ನನ್ನ ತಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಾಲು ಹಿಡಿದು ಕಂಪನಿ ಸ್ಥಾಪನೆಗೆ ಕಾರಣರಾಗಿದ್ದೇವೆ. ರಾಜ್ಯ ಸರ್ಕಾರ ಪ್ರತಿಷ್ಠೆ ಬದಿಗಿರಿಸಿ ಚಿಂಚೋಳಿ, ಸೇಡಂ, ಕಮಲಾಪುರ, ಕಾಳಗಿ ಮತ್ತು ಚಿತ್ತಾಪುರ ತಾಲ್ಲೂಕುಗಳ ರೈತರ ಹಿತದೃಷ್ಟಿಯಿಂದ ಕಂಪನಿಗೆ ಅನುಮತಿ ನೀಡಬೇಕು’ ಎಂದು ಶಾಸಕ ಡಾ.ಅವಿನಾಶ ಜಾಧವ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಕ್ಷೇತ್ರದ ರೈತರ ಪರವಾಗಿ ನಿರಂತರವಾಗಿ ದುಡಿದು ಒಂದು ಕೈಗಾರಿಕಾ ಕ್ಷೇತ್ರ ತರಲೇಬೇಕು ಎಂದು ಜಾದವ್ ಕುಟುಂಬ ಛಲತೊಟ್ಟು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವಿರತ ಪ್ರಯತ್ನದಿಂದ ಚಿಂಚೋಳಿ ಶುಗರ್ ಫ್ಯಾಕ್ಟರಿ ಪ್ರಾರಂಭಿಸಿದರು.
ಕಾಂಗ್ರೆಸ್ ನಾಯಕರು ರೈತರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಚಿಂಚೋಳಿ ರೈತರ ಕಾಳಜಿ ಇದ್ದರೆ, ಮಂತ್ರಿಗಳ ಮನೆಗೆ ಮುಂದೆ ಕುಳಿತು ಕಾರ್ಖಾನೆ ಪ್ರಾರಂಭಕ್ಕೆ ಪಪರವಾನಗಿ ಕುಡಿಸಿ ಎಂದು ಆಗ್ರಹಿಸುದ ಅವರು ರೈತ ವಿರೋಧಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಸ್ಥಳೀಯ ನಾಯಕರಿಗೆ ತಿರಗೇಟು ನೀಡಿದ್ದಾರೆ.