ಕಲಬುರಗಿ: ನಗರದ ಆಳಂದ ಚಕ್ ಪೋಸ್ಟ್ ಹತ್ತಿರ ಖಾಸಗಿ ಸಭಾಗಂಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲೆಯ ನೂತನ ಪದಾಧಿಕಾರಿಗಳ ನೇಮಕ ಹಾಗೂ ಹಸಿರು ಶಾಲು ದೀಕ್ಷೆ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ವಾಸುದೇವ್ ಮೇಟಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಶಾಂತಗೌಡ ಮಾಲಿಪಾಟೀಲ್ ಮಾತನಾಡಿ ಸಂಘಟನೆ ಮುಂದಿನ ದೇಯ ಉದ್ದೇಶ ಮತ್ತು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆ ಈಗಿನ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಉದ್ದು ಹೆಸರು ತೋಗರಿ ಬೆಳೆಗಳು ಹಾನಿಯಾಗಿದ್ದು ಹತ್ತಿ ಬೆಳೆಗಳು ನೆಟೆ ಹೋಗುತ್ತಿವೆ ಜಿಲ್ಲಾಡಳಿತ ಶೀಘ್ರದಲ್ಲಿ ರೈತರ ಸಹಾಯಕ್ಕೆ ಬರಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ತಿಳಿಸಿದರು.
ಈ ಸಭೆಯಲ್ಲಿ ರಾಯಚೂರು ಜಿಲ್ಲಾ ಅಧ್ಯಕ್ಷರಾದ ನರಸಿಂಹ ನಾಯಕ್, ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಗರಟಗಿ, ಕಲಬುರಗಿ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಮಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹಿರೇಮಠ, ಜೇವರ್ಗಿ ತಾಲೂಕಾ ಅಧ್ಯಕ್ಷ ಪಂಚಯ್ಯ, ಅಫ್ಜಲ್‍ಪುರ ತಾಲೂಕಾ ಅಧ್ಯಕ್ಷ ಸದಾಶಿವ ಗೌರ್, ಚಿತಾಪೂರ ತಾಲೂಕಾ ಅಧ್ಯಕ್ಷ ಮೌನೇಶ್, ಚಿಂಚೋಳಿ ತಾಲೂಕಾ ಅಧ್ಯಕ್ಷ ಗೌತಮ್ ಸೇರಿದಂತೆ ರೈತರು ಭಾಗವಹಿಸಿದ್ದರು.