ಶರಣರು, ಸಂತರು ಜನಿಸಿದ ನಾಡಲ್ಲಿ ನಾವು ಹುಟ್ಟಿರುವುದೇ ಪುಣ್ಯ

0
50

ಕಲಬುರಗಿ; ಸಂಸ್ಕಾರದ ಕೊರತೆ ಇರುವ ವ್ಯಕ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದರೊಂದಿಗೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅಪಾಯಕಾರಿ ಯಾಗುತ್ತನೆ ಎಂದು ಚಿಣಮಗೇರಿ ಪೂಜ್ಯರಾದ ಶ್ರೀ ವೀರ ಮಹಾಂತ ಶಿವಾಚಾರ್ಯರು ಹೇಳಿದರು.

ತಾಲೂಕಿನ ಜಂಬಗಾ (ಬಿ) ಗ್ರಾಮದಲ್ಲಿ ಮಹಾಲಕ್ಷ್ಮಿ ಹಾಗೂ ಹನುಮಾನ ದೇವಸ್ಥಾನದ ಶ್ರಾವಣ ಮಾಸದ ಮುಕ್ತಾಯ ಸಮಾರಂಭದಲ್ಲಿ ಆಶಿರ್ವಚನ ನೀಡುತ್ತಾ ಮನುಷ್ಯನು ವೈಜ್ಞಾನಿಕವಾಗಿ ಮುಂದುವರೆದಿದ್ದಾನೆ ನಿಜ ಆದರೆ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣಿಸುತ್ತಿದೆ. ಅಕ್ಷರ ಜ್ಞಾನ ಕಡಿಮೆಯಾದರೂ ಚಿಂತೆ ಇಲ್ಲ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮೃದ್ಧ ಸಮಾಜದತ್ತ ಸಾಗೋಣ. ಶರಣರು, ಸಂತರು, ಮಹಾಂತರು ಜನಿಸಿದ ಈ ನಾಡಲ್ಲಿ ತತ್ವ, ನಿಷ್ಠೆಯಿಂದ ಕಾರ್ಯ ಮಾಡಿದರೆ ಸಮಾಜಕ್ಕೆ ನಾವೇ ಮಾದರಿಯಾಗುತ್ತೇವೆ. ನಡೆ ನುಡಿ ಒಂದಾಗಿಸಿಕೊಂಡ ವ್ಯಕ್ತಿ ಈಗಲೂ ಅಮರವಾಗಿ ಉಳಿದಿದ್ದಾರೆ. ಸಮಸ್ಯೆಗಳು ಶರಣರಿಗೂ, ಸಂತರಿಗೂ ಬಿಡಲಿಲ್ಲ ಆದರೆ ನಮ್ಮದು ಯಾವ ಲೆಕ್ಕ ಸಂಸಾರ ಜಂಜಾಟ ಅನ್ನೋದು ದೂರ ಮಾಡಿ ಸಂಸ್ಕಾರದ ಸಮಾಜದತ್ತ ನಾವೆಲ್ಲರೂ ಸಾಗಬೇಕು.

Contact Your\'s Advertisement; 9902492681

ಈ ಭೂಮಿ ಕೇವಲ ಕಾಗದದಲ್ಲಿ ಮಾತ್ರ ನಾವು ಮಾಲೀಕರು ನಿಜವಾದ ಮಾಲೀಕ ಆ ದೇವನು. ಒಂದು ದಿನ ಬಿಟ್ಟು ಹೋಗುವ ಈ ಜೀವ ಅಧ್ಯಾತ್ಮದ ಚಿಂತನೆಯೊಂದಿಗೆ ಬದುಕು ಸುಂದರವಾಗಿ ಮಾಡಿಕೊಳ್ಳೋಣ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡಿದರು. ಯೋಗ ಗುರು ಪೂಜ್ಯ ರುದ್ರಮನಿ ದೇವರು, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಕವಿತಾ ಚವ್ಹಾಣ, ನಿವೃತ್ತ ಶಿಕ್ಷಕರಾದ ಶಿವಲಿಂಗಯ್ಯ ಸ್ವಾಮಿ ಮಠಪತಿ, ನಾಗೇಶ ಪಾಟೀಲ ಆಗಮಿಸಿದರು.

ಕಾರ್ಯಕ್ರಮದಲ್ಲಿ ಭಜನಾ ಸಂಘದ ಪದಾಧಿಕಾರಿಗಳು ಸೇರಿದಂತೆ ಗ್ರಾಮದ ಅನೇಕ ಜನರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here