ಕಲಬುರಗಿ; ಗ್ರಾಮೀಣ ಭಾಗದ ಜನರು ಜನಪದ ಸಾಹಿತ್ಯದಿಂದ ಒಡೆದ ಮನಸ್ಸುಗಳು ಒಂದುಗೂಡಿಸಿ ಉತ್ತಮ ಸಮಾಜ ಕಟ್ಟುತ್ತಾರೆ ಎಂದು ಕನ್ನಡ ಜಾನಪದ ಪರಿಷತ್ ತಾಲುಕಾ ಉತ್ತರ ವಲಯ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು.
ಆಳಂದ ತಾಲೂಕಿನ ಝಳಕಿ (ಬಿ) ಗ್ರಾಮದಲ್ಲಿ ಸೋಮವಾರ ವಿಶ್ವ ಜಾನಪದ ದಿನಾಚರಣೆಯ ನಿಮಿತ್ಯ ಕನ್ನಡ ಜಾನಪದ ಪರಿಷತ್ ಕಲಬುರಗಿ ತಾಲೂಕ ಉತ್ತರ ವಲಯದಿಂದ ಹಮ್ಮಿಕೊಂಡ ಜನಪದ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜನಪದವು ಒಬ್ಬರಿಂದ ಮತ್ತೊಬ್ಬರಿಗೆ ನಿರಂತರ ಚಲಿಸುವ ಮೂಲಕ ಒಳ್ಳೆಯ ಸಾಹಿತ್ಯ ಹುಟ್ಟುತ್ತದೆ. ಜನಪದ ಕಲಾವಿದರು ಅಕ್ಷರದ ಜ್ಞಾನ ಕಡಿಮೆಯಿದ್ದರೂ ಸಂಸ್ಕಾರದ ಜ್ಞಾನಿಗಳಾಗುರುತ್ತಾರೆ. ಇಂತಹ ಜ್ಞಾನದಿಂದ ನಾನು ನಂದು ಎನ್ನುವ ಭ್ರಾಂತಿ ನೀಗಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡುತ್ತಾರೆ. ಇಂತಹ ಕಲಾವಿದರು ಸಮೃದ್ಧ ಸಮಾಜದ ಆಸ್ತಿ ಯಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಗ್ರಾಮದ ಹಿರಿಯ ಮುತ್ಸದ್ದಿಯಾದ ಭಗವಂತರಾವ ಮುನ್ನಳಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯ ಮೇಲೆ ದಳಪತಿಯಾದ ಶರಣಬಸಪ್ಪ ಪಿ ಪಾಟೀಲ, ಗ್ರಾಮ ಪಂಚಾಯತಿ ಸದಸ್ಯರಾದ ಸೀತಾರಾಮ ಜಮಾದಾರ, ಸುಗಲಾಬಾಯಿ ಕಾಳೆ, ಹಾಗೂ ಯುವ ಮುಖಂಡರಾದ ಶರಣಬಸಪ್ಪ ವೈ ಪೊಲೀಸ ಪಾಟೀಲ, ಭೋಗೇಶ ಡಿ. ಬಿರಾದಾರ, ಭೋಗೇಶ ಪಾಟೀಲ ಇತರರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಯಾವುದೇ ಪ್ರಚಾರ ಬಯಸದೆ ಹಲವಾರೂ ದಶಕಗಳಿಂದ ನಿರಂತರ ಸೇವೆ ಮಾಡುತ್ತಿರುವ ಝಳಕಿ (ಬಿ) ಗ್ರಾಮದ ಹಿರಿಯ ಜನಪದ ಕಲಾವಿದರಾದ ಬಸವಂತರಾವ ಬಿರಾದಾರ, ಭೋಗೇಶ ನಾವದಗಿ, ದೇವಿದಾಸ ಕುಲಕರ್ಣಿ,ಮಾಣಿಕ ಪೂಜಾರಿ,ಗಂಗಾಧರ ಅಂಕಲಗಿ, ಯುವ ಕಲಾವಿದರಾದ ನಾಗೇಶ ಪಡಶೆಟ್ಟಿ, ಶರಣಬಸಪ್ಪ ಮಡಿವಾಳ, ಚಲಗೇರಿ ಗ್ರಾಮದ ಜನಪದ ಕಲಾವಿದ ಚನ್ನಪ್ಪ ಬಾಲ್ದೆ ಅವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಜಯಕುಮಾರ ಪೂಜಾರಿ, ಶರಣಬಸಪ್ಪ ಎನ. ಪಾಟೀಲ, ಮಲ್ಲಿನಾಥ ನಾವದಗಿ, ಭೀಮಾಶಂಕರ ಕೊಡಲಹಂಗರಗಿ, ಶರಣಗೌಡ ಪಾಟೀಲ ನಿಂಬಾಳ, ವೀರಣ್ಣ ಖೇಳಗಿ, ಗುಂಡೇರಾಯ ನಾವದಗಿ, ಭೋಗೇಶ ಬೋರಳ್ಳಿ, ಚಂದಣ್ಣಾ ಚಿತಲಿ ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಜನರು ಭಾಗವಹಿಸಿದ್ದರು. ಧನ್ಯವಾದಗಳೊಂದಿಗೆ ಹಣಮಂತರಾಯ ಅಟ್ಟೂರ ಮೊ.9945571036