ಕಲಬುರಗಿ: ಕಲ್ಯಾಣ ರಚನಾತ್ಮಕ ಪ್ರಗತಿ ಬಗ್ಗೆ ಸಚಿವ ಸಮಿತಿಯ ಮುಖಂಡರ ಸಮಾಲೋಚನಾ ಸಭೆ

0
123

ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಭೇಟಿ ನೀಡಿ ಬರುವ 17ನೇ ಸೆಪ್ಟೆಂಬರ್24 ರಂದು ಹಮ್ಮಿಕೊಂಡಿರುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸೇರಿದಂತೆ ಕಲ್ಯಾಣದ ಸರ್ವಾಂಗೀಣ ಅಭಿವೃದ್ಧಿಯ ವಿಷಯಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿ ವಿವರವಾಗಿ ಚರ್ಚಿಸಲಾಯಿತು.

ಸಮಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು, ಹಿರಿಯ ಚಿಂತಕರಾದ ಪ್ರೊ ಆರ್.ಕೆ.ಹುಡಗಿ, ಪ್ರೊ.ಬಸವರಾಜ ಕುಮ್ಮನೂರ್ ರವರು ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಕುರಿತು ವಿವರವಾಗಿ ಮಂಡಿಸಿ ಎರಡು ಪ್ರಸ್ತಾವನೆಗಳು ಸಲ್ಲಿಸಲಾಯಿತು.

Contact Your\'s Advertisement; 9902492681

ಸಮಿತಿಯ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಾತ್ನಾಡಿದ ಸಚಿವ ಪ್ರಿಯಾಂಕ್ ಖರ್ಗೆರವರು ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸುತ್ತಿರುವದೆ ನಮ್ಮ ಪ್ರದೇಶದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಅದರಂತೆ ಹೋರಾಟ ಸಮಿತಿ ಕಳೆದ ವರ್ಷದಿಂದ ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆಸಲು ಕಲ್ಯಾಣದ ಜನಮಾನಸದ ವತಿಯಿಂದ ಬೇಡಿಕೆ ಇಟ್ಟಿದ್ದು ಈಗ ಈಡೇರಿಸಲಸಾಗುತ್ತಿದೆ,

ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸೇರಿದಂತೆ ಪ್ರತ್ಯೇಕ ಕೃಷಿ ಮತ್ತು ಕೈಗಾರಿಕಾ ನೀತಿ ಸೇರಿದಂತೆ ಸಮಿತಿ ಸಲ್ಲಿಸಿರುವ 21 ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಂಪುಟದಲ್ಲಿ ಬಹುತೇಕ ನಮ್ಮ ಪ್ರದೇಶದ ಜನಮಾನಸದ ಬೇಡಿಕೆಗಳು ಈಡೇರಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದೆಂದು ಭರವಸೆ ನೀಡಿದ ಸಚಿವರು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ನೆಲೆ ಜಲ ಸಾಮರಸ್ಯದ ಸಂಸ್ಕೃತಿ, ಭಾಷೆ, ಸಾಹಿತ್ಯ ಸೇರಿದಂತೆ ಕಲ್ಯಾಣದ ಶ್ರೀಮಂತ ಪರಂಪರೆಯ ಹಾಗೂ ಅಭಿವೃದ್ಧಿ ವಿಷಯಗಳ ಒಂದು ನೀಲಿ ನಕ್ಷೆ ಸಿದ್ದಪಡಿಸಿದರೆ ನಿರಂತರ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು , ಚಿಂತನೆಗಳು ನಡೆಸಲು ಅನುಕೂಲವಾಗುವುದು ಈ ಬಗ್ಗೆ ಕಲ್ಯಾಣ ಕರ್ನಾಟಕದ ಪರಿಣಿತ ತಜ್ಘರ ಸಭೆ ಮಾಡಿ ಕ್ರಿಯಾ ಯೋಜನೆ ರೂಪಿಸಲು ಕ್ರಮಕೈಗೊಳ್ಳಲಾಗುವದೆಂದು ಸಮಿತಿಯ ಮುಖಂಡರಿಗೆ ಅಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಪರಿಣಿತರಾದ ಪ್ರೊ . ಶಂಕ್ರಪ್ಪ ಹತ್ತಿ, ಡಾ.ಗುರುಬಸಪ್ಪ, ಡಾ.ವೀರಶೆಟ್ಟಿ ಗಾರಂಪಳ್ಳಿ ಮುಖಂಡರಾದ ಅಸ್ಲಂ ಚೌಂಗೆ, ಕೈಲಾಸನಾಥ ದೀಕ್ಷಿತ್,ಸಾಬಿರ್ ಅಲಿ, ಸಾಜೀದ ಅಲಿ ರಂಜೋಳ್ವಿ ಶರಣಬಸಪ್ಪ ಕೆ,ಬಾಬಾ ಫಕ್ರುದ್ದೀನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here