ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜು, ಹಾಗೂ ಎಸ್ ನಿಜಲಿಂಗಪ್ಪ ದಂತ ಮಹಾವಿದ್ಯಾಲಯ ಹಾಗೂ ಕಾಮೇಡ ಕೆ ಇವರ ನಡುವೆ ಇಂದು ನಗರದ ಮಾರ್ಕೆಟ್ ಮುಖ್ಯ ರಸ್ತೆಯಲ್ಲಿರುವ ಕೆ ಇ ಬಿ ಕಚೇರಿ ಎದುರುಗಡೆ ಇರುವಕಾಮೇಡ ಕರೇಸ್ ಇನ್ನೋವೇಶನ್ ಹಬ್ ನ ಕಚೇರಿಯಲ್ಲಿ ಎರಡು ಸಂಸ್ಥೆಗಳ ಮದ್ಯೆ ತಿಳುವಳಿಕೆ ಒಪ್ಪಂದ ನಡೆಯಿತು.
ಈ ವೇಳೆ ತಿಳುವಳಿಕೆ ಒಪ್ಪಂದದ ಕರಾರು ಪತ್ರಗಳನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹಾಗೂ ಕಾಮೇಡ ಕರೇಸ್ ಅಧಿಕಾರಿಗಳಾದ ಸುಮೇಶ ಮಠದ,ಸಂದೇಶ,ಸಹನಾ, ಸಂದೀಪ್ ಸ್ಯಾಮ್ಸನ್ ಪರಸ್ಪರ ಹಂಚಿಕೊಂಡರು.
ನಂತರ ಮಾತನಾಡಿದಶಶೀಲ್ ಜಿ ನಮೋಶಿ ಇದರಿಂದಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ,ಇಂಟರ್ನಶಿಪ್ ಮತ್ತು ಉದ್ಯೋಗ ಅವಕಾಶಗಳಿಗೆ ಸಹಾಯಕವಾಗಲಿದೆ ಎಂದು ಹೇಳಿದರು.
ನಂತರ ಈ ಮೈಲೇಜ್ ಲಿಮಿಟೆಡ್ ಜೋತೆಯು ಪರಸ್ಪರ ತಿಳುವಳಿಕೆಯ ಒಪ್ಪಂದ ನಡೆಯಿತು ಈ ಮೈಲೇಜ್ ಲಿಮಿಟೆಡ್ ನ.ಸಿಇಓ ಬಸವರೆಡ್ಠಿ ಉಪಸ್ಥಿತರಿದ್ದರು. ಈ ಪರಸ್ಪರ ತಿಳುವಳಿಕೆಯ ಒಪ್ಪಂದ ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದಉದಯಕುಮಾರ್ ಚಿಂಚೋಳಿ ಆಡಳಿತ ಮಂಡಳಿ ಸದಸ್ಯರಾದ ಡಾ ಮಹಾದೇವಪ್ಪ ರಾಂಪೂರೆ,ಸಾಯಿನಾಥ ಪಾಟೀಲ್,ಡಾ ಕಿರಣ್ ದೇಶಮುಖ್, ನಾಗಣ್ಣ ಘಂಟಿ ಪಿಡಿಎ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ ಎಸ್ ಆರ್ ಪಾಟೀಲ್ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಜಯ ಮುದ್ದಾಇಂಜಿನಿಯರಿಂಗ್ ಕಾಲೇಜು ಉಪ ಪ್ರಾಚಾರ್ಯರಾದ ಡಾ ಭಾರತಿ ಹರಸೂರ ಡಾ ಎಸ್ ಆರ್ ಹೊಟ್ಟಿ, ಡಾ ನಾಗೇಶ್ ಸಾಲಿಮಠ ಹಾಗೂ ಸಂಸ್ಥೆಯ ವಿವಿಧ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.