ಚಿಂಚೋಳಿ: ಸಾಲಭಾಧೆಗೆ ರೈತ ಆತ್ಮಹತ್ಯೆ

0
137

ಕಲಬುರಗಿ: ಅತಿವೃಷ್ಠಿಯಿಂದ ತೊಗರಿ, ಉದ್ದು, ಹೆಸರು ಬೆಳೆ ಮಳೆ ನೀರು ಹತ್ತಿ ನಾಶ ಮತ್ತು ಸಾಲಭಾದೆ ತಾಳದೆ ವಿಷ ಸೇವಿಸಿ ರೈತ ಓರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂಚೋಳಿ ತಾಲ್ಲೂಕಿನ ಇರಗಪಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಇರಗಪಳ್ಳಿ ಗ್ರಾಮದ ಚಂದ್ರಪ್ಪ ತಂದೆ ತಿಪ್ಪಣ್ಣ ಪೂಜಾರಿ (49) ಆತ್ಮಹತ್ಯೆಗೆ ಶರಣಾದ ರೈತ. ಇತ್ತೀಚೆಗೆ ಉಂಟಾದ ಅತಿವೃಷ್ಠಿಯಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಬೆಳೆಯನ್ನೆ ನಂಬಿಕೊಂಡು ಚಂದ್ರಪಟ್ಟ ತಿಪ್ಪಣ್ಣ ಪೂಜಾರಿ ಅವರು ಪಿಕೆಜಿಬಿ ಬ್ಯಾಂಕ್ ನಲ್ಲಿ 75 ಸಾವಿರ, ಚತ್ರಸಾಲ ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ 35 ಸಾವಿರ ಸಾಲ ಮಾಡಿದರು.

Contact Your\'s Advertisement; 9902492681

ಬೆಳೆ ನಾಶದಿಂದ ಸಾಲ ತೀರಿಸಲಾಗದೆ ಮನೆಯಲ್ಲಿಯೇ ಹೆಸರು ಬೆಳೆಗೆ ವಿಷದ ಎಣ್ಣೆ ಸೇವಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಚಿಂಚೋಳಿ ಸರಕಾರಿ ಆಸ್ಪತ್ರಗೆ ದಾಖಲಿಸಿದರು. ಗಂಭಿರ ಪರಿಸ್ಥಿತಿ ಇರುವದರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಾವಾಗ ಮಾರ್ಗದ ಮಧ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಮೃತನಿಗೆ ಪತ್ನಿ ಇಬ್ಬರು ಪುತ್ರ ಪುತ್ರಿ ಇದ್ದಾರೆ. ಘಟನೆ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ, ಜಾಫರ್ ಖಾನ್, ಹಣಮಂತ ಪೂಜಾರಿ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here