ಪಿ.ಎಂ.ಆವಾಸ್ (ಗ್ರಾಮೀಣ) ಯೋಜನೆ: ದಾಖಲೆ ಸಲ್ಲಿಸಲು ಫಲಾನುಭವಿಗಳಿಗೆ ಜಿಲ್ಲಾ ಪಂಚಾಯತ್ CEO ಸೂಚನೆ

0
107

ಕಲಬುರಗಿ: ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 2024-25ನೇ ಸಾಲಿಗೆ ಕಲಬುರಗಿ ಜಿಲ್ಲೆಗೆ 13,175 ಮನೆಗಳನ್ನು ಜಿಪಿಎಸ್ ಮಾಡಲು ಗುರಿ ನೀಡಲಾಗಿದ್ದು, ಆದ್ಯತಾ ಪಟ್ಟಿಯಲ್ಲಿರುವ ಫಲಾನುಭವಿಗಳು ಇದೇ ಸೆ. 15 ರೊಳಗೆ ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.

ಜಿಲ್ಲೆಯ 13,175 ಮನೆಗಳ ಫಲಾನುಭವಿಗಳ ಪಟ್ಟಿ ಈಗಾಗಲೇ ಗ್ರಾಮ ಪಂಚಾಯತಿಯಲ್ಲಿ ಲಭ್ಯವಿದ್ದು, ಇದನ್ನು ಖಾತ್ರಿಪಡಿಸಿಕೊಂಡು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ, ಜಾಬ್ ಕಾರ್ಡ್, ಪಡಿತರ ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

Contact Your\'s Advertisement; 9902492681

ಅದರಂತೆ ಪಿಡಿಓ, ಟಿಎನ್‌ಒ ಹಾಗೂ ಡಿಇಓ ಅವರುಗಳು ಸೆ.12 ರಿಂದ 15ರ ವರೆಗೆ (ರಜೆ ದಿನಗಳು ಸೇರಿ) ಫಲಾನುಭವಿಗಳು ನೀಡುವ ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆ, ಜಿಪಿಎಸ್ ಫೋಟೋಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಅಪಲೋಡ್ ಮಾಡಬೇಕು.

ಈ ಸಂಬಂಧ ಫಲಾನುಭವಿಗಳಿಂದ ಏನೇ ದೂರು, ಅಕ್ಷೇಪಣೆಗಳಿದಲ್ಲಿ ಸಂಬಂಧಪಟ್ಟ ಆಯಾ ತಾಲೂಕಿನ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿ ಬಗೆಹರಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಪ್ರಸಕ್ತ ಸಾಲಿಗೆ ರಾಜ್ಯಕ್ಕೆ 2,26,175 ಮನೆಗಳ ಗುರಿಯನ್ನು ಮಂಜೂರು ಮಾಡಿದ್ದು, ಪ್ರಧಾನಮಂತ್ರಿಗಳು ಇದೇ ಸೆ.15 ರಂದು ರಾಜ್ಯದ 1 ಲಕ್ಷ ಮನೆಗಳಿಗೆ ಏಕಕಾಲಕ್ಕೆ ಮೂದಲೇ ಕಂತಿನ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here