ಸುರಪುರ:ವಿದ್ಯಾರ್ಥಿಗಳು ಶಿಕ್ಷಣ ಕಲಿಯುವುದರ ಜೊತೆಗೆ ಸಂಸ್ಕಾರವನ್ನು ಕಲಿಯ ಬೇಕು ಅಂದಾಗ ಶಿಕ್ಷಣದ ಕಲಿಕೆ ಪರಿಪೂರ್ಣ ಎನಿಸಲಿದೆ ಹಾಗೂ ಇದು ಅತ್ಯಂತ ಅವಶ್ಯಕವೂ ಆಗಿದೆ ಎಂದು ಸುರಪುರ ಪೆÇೀಲಿಸ್ ಠಾಣೆಯ ಪಿ.ಎಸ್.ಐ ಶಿವರಾಜ ಪಾಟೀಲ್ ಹೇಳಿದರು.
ನಗರದ ರಂಗಂಪೇಟೆಯ ಬಸವೇಶ್ವರ ಪಿ.ಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಪಿ.ಯು.ಸಿ ಪ್ರಥಮ ವರ್ಷ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಪ್ರಸಕ್ತ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಎಂಬುವುದು ಬರಿ ನೌಕರಿಗಾಗಿ ಕಲಿಯುವುದು ಮಾತ್ರವಲ್ಲ, ಶಿಕ್ಷಣದಿಂದ ಸಮಾಜದಲ್ಲಿ ಬದುಕುವ ಚಿಂತನೆ ಕಲೆಯಬೇಕು ಹಾಗೂ ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನಾಡ, ನುಡಿ, ಭಾಷ ಪ್ರೇಮದ ಜೊತೆಗೆ ದೇಶಪ್ರೇಮದ ಕಲ್ಪನೆ ಮೂಡಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಂಗಂಪೇಟ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಸಿದ್ದಣ್ಣ ಹೊಸಗೌಡ್ರು ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮವಾದ ನಂಬಿಕೆ, ಆತ್ಮ ವಿಶ್ವಾಸ, ಶ್ರದ್ಧೆ, ದೃಢನಿರ್ಧಾರ, ಸಾದನೆಯ ಛಲ, ಉತ್ತಮ ಗುರಿ ಉದ್ಧೆಶ ಇವುಗಳನ್ನು ಹೊಂದಿದ್ದರೆ ಮಾತ್ರ ಬದುಕಿನಲ್ಲಿ ಏನಾದರು ಸಾಧಿಸಲು ಸಾಧ್ಯಾವಾಗುತ್ತದೆ. ಸಾಧನೆ ಎಂಬುವುದು ಸಾಧಕನ ಕೈವಶ ಅದರ ಸದ್ಬಳಕೆ ಸಾಧಕರಿಂದಾಗಬೇಕು ಎಂದು ಹೇಳಿದರು.
ಇನ್ನೊರ್ವ ಅತಿಥಿಗಳಾಗಿದ್ದ ಶಿವಶರಣಪ್ಪ ಹೆಡಗಿನಾಳ ಮಾತನಾಡಿ, ನಮ್ಮ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಬೆಂಗಳೂರು, ಮೈಸೂರು ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ದೆಯೊಡ್ಡಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಇದೆ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶ್ರೀಕರ ಭಟ್ ಜೋಷಿ ಅವರನ್ನು ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಎಲ್ಲಾ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಉಪ ಪ್ರಾಚಾರ್ಯ ಬಲಭೀಮ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮವನ್ನು ಮಾನಯ್ಯ ರುಕ್ಮಾಪೂರ ನಿರೂಪಿಸಿದರು, ಶೃತಿ ಹಿರೇಮಠ ಸ್ವಾಗತಿಸಿದರು, ಸಿದ್ಧಪ್ರಸಾದ ವಂದಿಸಿದರು, ಪ್ರಮುಖರಾದ ರೋಹಿಣಿ ಸುರಪುರ, ಮೇಘಾ ದಾಯಿಪುಲ್ಲೆ, ಶ್ರೀಕಾಂತ ರತ್ತಾಳ, ರುದ್ರಪ್ಪ ಕೆಂಭಾವಿ, ವೆಂಕಟೇಶ ದೇವಿಕೇರಾ ಸೇರಿದಂತೆ ಇತರರಿದ್ದರು.