ಸಸಿ ನೆಡುವ ಮೂಲಕ ದೇವತ್ಕಲ್‌ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

0
94

ಸುರಪುರ : ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸಲಾಯಿತು .

ಗ್ರಾಮದ ವಾಲ್ಮೀಕಿ ಯುವ ಘಟಕದವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಅಂಗವಾಗಿ ಸಸಿಗಳನ್ನು ನೇಡುವುದರ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜುಗೌಡ ಚನ್ನಪಟ್ಟಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜುಗೌಡರವರು ಪರಿಸರ ಕಾಳಜಿ ನಮ್ಮೆಲ್ಲರ ಜವಾಬ್ದಾರಿ ಪರಿಸರ ಉಳಿದರೆ ಮಾತ್ರ ಶುದ್ಧ ಜೀವನ ಸಾಗಿಸಲು ಸಾಧ್ಯ ಆದ್ದರಿಂದ ಜಯಂತಿಗಳ ಹೆಸರಿನಲ್ಲಿ ದುಂದುವೆಚ್ಚ ಮಾಡುವುದರ ಬದಲು ಸಮಾಜ ಮುಖಿ ಕೆಲಸ ಮಾಡಬೇಕು, ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಂದು ಉತ್ತಮ ಕೆಲಸವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪರಮ ಪೂಜ್ಯ ಗೋವಿಂದರಾಜ ಮುತ್ಯರವರು ಪೂಜೆ ಸಲ್ಲಿಸಿದರು, ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಾಲ್ಮೀಕಿ ಯುವ ಘಟಕದ ಅಧ್ಯಕ್ಷರಾದ ರಂಗಣ್ಣ ಘಂಟಿಯವರು ಮಹರ್ಷಿ ವಾಲ್ಮೀಕಿಯವರು ವಿಶ್ವಕ್ಕೆ ಹಿಂದೂಧರ್ಮದ ಮಹಾನ ಗ್ರಂತವನ್ನು ರೂಪಿಸಿ ಕೋಟ್ಟಿದ್ದಾರೆ, ಆದರೆ ವಾಲ್ಮೀಕಿ ಪರಿಚಯಿಸಿದ ರಾಮ, ಸೀತೆ,ಹಣುಮಂತ ಬೇಕು ಮಹಾನ ಗ್ರಂಥ ರಚಿಸಿದ ವಾಲ್ಮೀಕಿಯನ್ನು ಮಾತ್ರ ಜಾತಿಗೆ ಸಿಮಿತ ಮಾಡಲಾಗಿದೆ ಇದು ಸಮಾಜ ದೃಷ್ಟಿಯಿಂದ ಸರಿಯಲ್ಲ ಒಂದು ಸಮಾಜ ಅಭಿವೃದ್ಧಿಯಾಗಬೇಕಾದರೆ ಆ ಸಮಾಜದ ಮಕ್ಕಳು ವಿದ್ಯಾವಂತರಾಗಬೆಕೆಂದರು.

ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಸರಕಾರಿ ಇಲಾಖೆ ಗಳಾದ ಶಾಲೆ ಮತ್ತು ಸರಕಾರಿ ಪಶು ಆಸ್ಪತ್ರೆ ಗಳಲ್ಲಿ ಜಯಂತಿ ಆಚರಿಸಿ, ನಂತರ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರವುಳ್ಳ ಟೀಶರ್ಟ್ ದರಿಸಿದ ನೂರಾರು ಯುವಕರ ಬೈಕರ್ಯಾಲಿ ನೋಡುಗರ ಗಮನ ಸೇಳೆಯಿತು .

ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ವೆಂಕಟೇಶ್ ಕರಡಿಗುಡ್ಡ್ ಗ್ರಾಮ ಪಂಚಾಯಿತಿ ಸದಸ್ಯರಾದ ಮರಮಣ್ಣ ಗೌಡ, ಸಮಾಜದ ಪ್ರಮುಖರಾದ
ಕೃಷ್ಣಪ್ಪ ಗೌಡ ಅಯ್ಯಪ್ಪ ಗೌಡ,  ಹಣಮಂತ್ರಾಯ ಡೊಣ್ಣೆಗೆರಿ, ಲಕ್ಷ್ಮಣ್ ನಾಯಕ ನವದಾಗಿ
ಪಾರಪ್ಪ ದೇವತ್ಕಲ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here