ಕಲಬುರಗಿ: ರಾಮಾಯಣದ ಆದರ್ಶ ತತ್ವಗಳು ಮತ್ತು ಮೌಲ್ಯಗಳನ್ನು ಇಡೀ ಜಗತ್ತಿನಲ್ಲಿಯೇ ಪ್ರಚಲಿತದಲ್ಲಿ ಇವೆ ಎಂದು ನೂತನ ವಿದ್ಯಾಲಯ ಕನ್ಯಾ ಪ್ರೌಢಶಾಲೆಯ ಶಿಕ್ಷಕಿ ಶ್ರೀ ಲಕ್ಷ್ಮಿದೇವಿ ರತ್ನಗಿರಿ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ರಾಮಾಯಣ ಒಂದು ಚಾರಿತ್ರಿಕ ಚರಿತ್ರೆ ಆಗಿದೆ. ಅದರಲ್ಲಿ ರಾಮರಾಜ್ಯದ ಕಲ್ಪನೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಆ ರಾಮರಾಜ್ಯದ ಕನಸು ಇಂದಿನ ದಿನಗಳಲ್ಲಿ ನನಸಾಗಬೇಕಾಗಿದೆ. ಮನಷ್ಯನ ಮನಸ್ಸುಗಳು ಪವಿತ್ರವಾದಗ ಮಾತ್ರ ಮನಸ್ಸಿಗೆ ಆನಂದ ಸಿಗುತ್ತದೆ ಆಗ ಇಡೀ ಸಮಾಜವನ್ನು ನನ್ನದು ಎಂದು ಅಪ್ಪಿಕೊಳ್ಳಲ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಯಾದ ಪ್ರೊ, ಪ್ರಮೀಳಾ ಅಂಬೇಕರ್ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅಂದಿನ ಕಾಲದಲ್ಲಿ ಕಾಡನ್ನು, ಸಂಪತ್ತನ್ನು ಸಂರಕ್ಷಿಸಿದವರು ಋಷಿ ಮುನಿಗಳು. ಬೇಡ ಜನಾಂಗ ಕೂಡ ಕಾಡಲ್ಲಿ ವಾಸಮಾಡಿ ಭರತ ದೇಶದ ಭೂಭಾಗದ ಸಂರಕ್ಷಣೆ ಮಾಡಿದರು. ವಾಲ್ಮೀಕಿಯ್ನು ನಾವು ಒಂದು ಸಮುದಾಯದ ವ್ಯಕ್ತಿಯಾಗಿ ನೋಡದೇ ಒಂದು ಸರ್ವಜನಾಂಗದ ಶಕ್ತಿಯನ್ನಾಗಿ ನೋಡುವುದು ಅವಶ್ಯ ಇದೆ ಎಂದು ಅವರು ಹೇಳಿದರು.
ನೂತನ ಪದವಿ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ. ಗುರುಮಧ್ವಾಚಾರ್ಯ ನವಲಿ ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವ ಪ್ರೊ, ಸಿ ಸೋಮಶೇಖರ್, ಮೌಲ್ಯಮಾಪನ ಕುಲಸಚಿವ ಪ್ರೊ, ಡಿ. ಎಂ ಮದರಿ, ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಂಯೋಜಕ ಪ್ರೊ, ಬಸವರಾಜ ಸಣ್ಣಕ್ಕಿ, ಪ್ರೊ, ಡಿ ಬಿ ಪಾಟೀಲ, ಪ್ರೊ ವಿ. ಟಿ ಕಾಂಬಳೆ, ಪ್ರೊ. ಎಸ್ ಪಿ ಮೇಲಕೇರಿ, ಪ್ರೊ. ಎಚ್ ಟಿ ಫೋತೆ, ಪ್ರೊ. ಜಗನ್ನಾಥ ಸಿಂಧೆ ಉಪಸ್ಥಿತರಿದ್ದರು.