- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ; ಶಿಕ್ಷಕ, ಶಿಕ್ಷಕಿಯರ- ವಿದ್ಯಾರ್ಥಿಗಳ ಮಧ್ಯೆ ಉತ್ತಮ ಶಿಕ್ಷಣದ ಕೊಂಡಿ ಇದ್ದಾಗ ಮಾತ್ರ ದೇಶ ಸಮೃದ್ಧಿ ಹೊಂದಲು ಸಾಧ್ಯ ಎಂದು ರಿಕ್ರಿಯೇಷನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಕಾಶಿ ಹೇಳಿದರು.
ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ರಿಕ್ರಿಯೇಷನ್ ಶಿಕ್ಷಣ ಸಂಸ್ಥೆ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಿದ್ದಾರೆ ಎಂದು ಹೇಳಿದರು.
ಪುರಾಣ ಪುಣ್ಯಗಳ ಕಾಲದಿಂದಲೂ ಗುರು ಶಿಷ್ಯರ ನಡುವೆ ಅವಿನಾಭಾವ ಸಂಬದಂತೆ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದ್ದಾರೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚಿಸಿದೆ. ಜ್ಞಾನದ ಹಸಿವನ್ನು ತೀರಿಸಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣಿಯ. ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಿಂದ ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪ್ರಭುದ್ಧಗೊಳಿಸಿದ ಶಿಕ್ಷಕರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿ ದೇವಪ್ಪ ಮಾತನಾಡಿ, ಸಂಸ್ಥೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕಲಿತ ನಾವು ಎಲ್ಲ ವಿದ್ಯಾರ್ಥಿಗಳು ಒಂದಿಲ್ಲೊಂದು ಉನ್ನತ ಸ್ಥಾನದಲ್ಲಿ ನಿರತರಾಗಿದ್ದೇವೆ. ನಾವು ಯಾವ ಒಬ್ಬ ವಿದ್ಯಾರ್ಥಿಯೂ ಸುಮ್ಮನೆ ಕುಳಿತಿಲ್ಲ. ಇಲ್ಲಿನ ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಉತ್ತಮ ಶಿಕ್ಷಣ ನೀಡಿದ್ದರಿಂದ ಉನ್ನತ ಸ್ಥಾನದಲ್ಲಿದ್ದೇವೆ. ಅದೇ ನಮಗೆ ಹೆಮ್ಮೆ ಎಂದು ಹೇಳಿದರು.
ಸಂಸ್ಥೆ ಸಂಚಾಲಕ ವೀರೇಂದ್ರಕುಮಾರ ಕೊಲ್ಲೂರ, ಸದಸ್ಯ ಆದಮಲಿ ಸೇಟ್, ಶಿಕ್ಷಕರಾದ ಮಸ್ತಾನ ಪಟೇಲ್, ಖಮರುನ್ನಿಸಾ ಬೇಗಂ, ಮನುಜಾ ಉತ್ತರಕರ್, ಶಶಿರೇಖಾ, ಮನೋಹರಬಾಬು, ಸಿದ್ರಾಮರೆಡ್ಡಿ ಮಾತನಾಡಿದರು.
ರಿಕ್ರಿಯೇಷನ್ ಶಿಕ್ಷಣ ಸಂಸ್ಥೆ ಹಳೆಯ ವಿದ್ಯಾರ್ಥಿಗಳ ಬಳಗದ ಮುಖಂಡರಾದ ತಿರುಪತಿ ಚವ್ಹಾಣ, ವಾಜೀದ್, ದೇವಪ್ಪ, ಭಾರತಿ, ಜಹೀರ್, ವಿಶ್ವನಾಥ, ಇಕ್ಬಾಲ್, ಚನ್ನು, ಶಿವರಾಜ, ಗಿರೀಶ, ವಿನೇಶ, ಸಂಜು, ಶರಣು. ಸರಿತಾ, ಜಯಲಕ್ಷ್ಮೀ, ಅನಿತಾ, ಬಸಮ್ಮ, ಪ್ರೀತಿ, ಸುನೀತಾ, ಉಮಾಶ್ರೀ ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆ ಕಾರ್ಯದರ್ಶಿ ಸೈಯದ್ ನಜೀರೋದ್ದಿನ್ ಮುತ್ತುವಲ್ಲಿ, ಸಹ ಕಾರ್ಯದರ್ಶಿ ಭೀಮರಾಯ ಹಡಪದ, ಸದಸ್ಯರಾದ ಚಿತಾಸಾಬ ಹೊನಗುಂಟಾ, ಶೇಖ್ ಚಾಂದಪಾಶಾ, ಸಲೀಂಸಾಬ, ನಾಗರಾಜ ಬೆಳಮಗಿ, ಪಾರ್ವತಿ ಕಾಶಿ, ಸಲೀಮುನ್ನಿಸಾಬೇಗಂ, ಹಣಮಂತ ಕಾಶಿ, ಪಾರ್ವತಿ ಕಾಶಿ ವೇದಿಕೆಯಲ್ಲಿದ್ದರು.
ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಶಿಕ್ಷಕರಿಗೆ ಗೌರವ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶಿಕ್ಷಕ, ಶಿಕ್ಷಕಿಯರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಡಳಿತ ಮಂಡಳಿರವರಿಗಾಗಿ ವಿದ್ಯಾರ್ಥಿಗಳು ಕ್ರೀಡಾಕೂಟ ಏರ್ಪಡಿಸಿದ್ದರು. ಕ್ರೀಡೆಗಳಲ್ಲಿ ಜಯಗಳಿಸಿದವರಿಗೆ ಬಹುಮಾರ ನೀಡಿ ಗೌರವಿಸಲಾಯಿತು. ಕಾಶಿರಾಯ ನಿರೂಪಿಸಿದರು. ಸರಿತಾ ಕುಲಕರ್ಣಿ ವಂದಿಸಿದರು.