371 (ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ವಿಶೇಷ ಸಚಿವಾಲಯದ ಬೇಡಿಕೆ

0
45

ಕಲಬುರಗಿ: ಕಲಬುರಗಿ ನಗರದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಸೋಮವಾರದಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಕಲ್ಯಾಣ ಕರ್ನಾಟಕದ ರಚನಾತ್ಮಕ ಅಭಿವೃದ್ಧಿ ಮತ್ತು ಸಂವಿಧಾನದ 371 (ಜೆ) ಕಲಂ ಅನುμÁ್ಠನದಲ್ಲಿನ ಸಾಧನೆಗಳು ಮತ್ತು ಸಮಸ್ಯೆಗಳು” ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ, ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ವಿಶೇಷ ಪ್ರಯೋಜನಗಳನ್ನು ಖಾತರಿಪಡಿಸುವ ಸಂವಿಧಾನದ 371 (ಜೆ) ವಿಧಿಯ ಪರಿಣಾಮಕಾರಿ ಅನುμÁ್ಠನಕ್ಕಾಗಿ, ರಾಜ್ಯ ಸರ್ಕಾರವು ವಿಶೇಷ ಸಚಿವಾಲಯವನ್ನು ರಚಿಸುವಂತೆ ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು.

ಸಂವಿಧಾನದ 371 (ಜೆ) ವಿಧಿಯ ಅನುμÁ್ಠನ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಕಾರ್ಯನಿರ್ವಹಣೆಯ ವಿವಿಧ ಅಂಶಗಳ ಕುರಿತು ವಿಸ್ತೃತ ಚರ್ಚೆಯ ನಂತರ ನಡೆದ ವಿಚಾರ ಸಂಕಿರಣವು ಹಗಲು ಅಧಿವೇಶನದಲ್ಲಿ ಶನಿವಾರ ನಡೆದ ವಿಚಾರ ಸಂಕಿರಣದ ಕೊನೆಯಲ್ಲಿ 14 ನಿರ್ಣಯಗಳನ್ನು ಅಂಗೀಕರಿಸಿತು. ವಿಚಾರ ಸಂಕಿರಣದಲ್ಲಿ ಮತ್ತೊಂದು ಅಂಗಿಕರಿಸಿದ ನಿರ್ಣಯದಲ್ಲಿ, 371 (ಜೆ) ಕಲಂ 12 (ಎ) ಅಡಿಯಲ್ಲಿ ಎದ್ದಿರುವ ವಿವಾದಗಳನ್ನು ಬಗೆಹರಿಸಲು ಕಲಬುರಗಿಯಲ್ಲಿ ತನ್ನ ಕೇಂದ್ರ ಕಚೇರಿಯೊಂದಿಗೆ ವಿಶೇಷ ನ್ಯಾಯಮಂಡಳಿಯನ್ನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಿತು.

Contact Your\'s Advertisement; 9902492681

ಹೀಗೆ ಮುಂದುವರೆದು ಮತ್ತೊಂದು ನಿರ್ಣಯ ಅಂಗಿಕರಿಸಿ, ಕಲ್ಯಾಣ ಕರ್ನಾಟಕ ಪ್ರದೇಶದ ಕಾಲಮಿತಿಯ ಅಭಿವೃದ್ಧಿಯನ್ನು ಸಾಧಿಸಲು ರಾಜ್ಯ ಸರ್ಕಾರದಿಂದ ಸಮಗ್ರ ವೈಜ್ಞಾನಿಕ ಪಂಚವಾರ್ಷಿಕ ಯೋಜನೆಗೆ ಒತ್ತಾಯಿಸಿತು. ಗ್ರಾಮ ಪಂಚಾಯಿತಿಯನ್ನು ಒಂದು ಘಟಕವಾಗಿ ತೆಗೆದುಕೊಂಡು ಅಭಿವೃದ್ಧಿಯಲ್ಲಿನ ಪ್ರದೇಶದ ಅಸಮತೋಲನವನ್ನು ಹೋಗಲಾಡಿಸಲು ಮತ್ತೊಂದು ಕಾಲಮಿತಿ, ಕ್ರಿಯಾ ಯೋಜನೆಯನ್ನು ರೂಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿತು. ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನು ವಿಶೇಷ ಶಿಕ್ಷಣ ಅಭಿವೃದ್ಧಿ ವಲಯವನ್ನಾಗಿ ಘೋಷಿಸಿ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ವಿಚಾರ ಸಂಕಿರಣದಲ್ಲಿ ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿತು.

ಮತ್ತೊಂದು ನಿರ್ಣಯದಲ್ಲಿ ಕೆಕೆಆರ್‍ಡಿಬಿ ತನ್ನ ಪಾರದರ್ಶಕ ಕಾರ್ಯನಿರ್ವಹಣೆಗಾಗಿ ಕೈಗೊಂಡಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆU,É ಮೇಲ್ವಿಚಾರಣಾ ಸಮಿತಿ, ಮೌಲ್ಯಮಾಪನ ಸಮಿತಿ ಮತ್ತು ಜಾಗೃತ ಸಮಿತಿ ಸೇರಿದಂತೆ ಮೂರು ಪ್ರತ್ಯೇಕ ಸಮಿತಿಗಳನ್ನು ರಚಿಸುವಂತೆ ವಿಚಾರ ಸಂಕಿರಣದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೃಷಿ ಮತ್ತು ಕೈಗಾರಿಕಾ ನೀತಿಯನ್ನು ಸಹ ಅದು ಒತ್ತಾಯಿಸಿತು. ಕೃμÁ್ಣ ಮತ್ತು ಗೋದಾವರಿ ಜಲಾನಯನ ಪ್ರದೇಶದಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ, ವಿಚಾರ ಸಂಕಿರಣ ಸರ್ಕಾರವನ್ನು ಒತ್ತಾಯಿಸಿತು.

ತೊಗರಿ ಅಭಿವೃದ್ಧಿ ಮಂಡಳಿಯನ್ನು ಇನ್ನಷ್ಟು ಬಲಪಡಿಸಬೇಕು. ಪ್ರತಿ ವರ್ಷ ತೊಗರಿಗೆ ಬೆಂಬಲ ಬೆಲೆಯನ್ನು ನೀಡುವುದರ ಜೊತೆಗೆ ಅದರ ಉಪ ಉತ್ಪನ್ನಗಳ ಉತ್ಪಾದನೆಯನ್ನು ತೆಗೆದುಕೊಳ್ಳಲು ಮತ್ತು ಪ್ರದೇಶದಲ್ಲಿ ಉತ್ಪಾದಿಸುವ ತೊಗರಿಯ ಬ್ರ್ಯಾಂಡಿಂಗ್ ತೆಗೆದುಕೊಳ್ಳಲು ಮಂಡಳಿಗೆ ಅಧಿಕಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ನಿರ್ಣಯ ಅಂಗಿಕರಿಸಿ ಒತ್ತಾಯಿಸಲಾಯಿತು.

ಈ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಎಲ್ಲರಿಗೂ ಸ್ವಚ್ಛ ಕುಡಿಯುವ ನೀರು, ಒಳಚರಂಡಿ ಸಂಪರ್ಕಗಳು ಹಾಗೂ ಇತರ ಮೂಲಭೂತ ಸೌಲಭ್ಯಗಳು ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವಂತೆ ಅಂಗಿಕರಿಸಿದ ನಿರ್ಣಯಗಳಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here