ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ

0
24

ಕಲಬುರಗಿ; ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕಲಬುರಗಿ ಬಸವ ಸಮಿತಿ ಈ ಸಂಸ್ಥೆಯು ಸಾಹಿತ್ಯ, ಸಂಶೋಧನೆ, ಸಮಾಜಿಕ ಸೇವೆ, ಧಾರ್ಮಿಕ ಸೇವೆ ಮಾಡುತ್ತಿರುವ ಗಣ್ಯರನ್ನು, ಸಂಸ್ಥೆಗಳನ್ನು ಗುರುತಿಸಿ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಬಿ.ಡಿ.ಜತ್ತಿ ಅವರ ಹೆಸರಿನಲ್ಲಿ ಪ್ರತಿವರ್ಷ “ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ”ಯನ್ನು ನೀಡುತ್ತ ಬರಲಾಗಿದೆ.

ಡಾ. ಬಿ.ಡಿ.ಜತ್ತಿ ಅವರ ಜನ್ಮದಿನ. ಅವರು ಬಸವ ಸಮಿತಿ ಸ್ಥಾಪನೆ ಮಾಡಿದ ನೆನಪಿಗಾಗಿ ಅವರ ಜನ್ಮದಿನವನ್ನು ‘ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ’ ಎಂದು ಆಚರಿಸುತ್ತ ಬರಲಾಗಿದೆ.

Contact Your\'s Advertisement; 9902492681

2018 ರಿಂದ ಶರಣ ಸಮಾಜ, ಧರ್ಮ, ಸಾಹಿತ್ಯ-ಸಂಸ್ಕøತಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರಿಗೆ, ಸಂಶೋಧನೆ ಗೈದ ವಿದ್ವಾಂಸರಿಗೆ, ಸಂಸ್ಥೆಗಳಿಗೆ ಡಾ. ಬಿ.ಡಿ. ಜತ್ತಿ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಕೊಡಮಾಡುತ್ತ ಬರುತ್ತಿದೆ.

ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ, ಇದು ಜನತೆಯ ಮಠ, ಪೂಜ್ಯ ಲಿಂ. ಚನ್ನಬಸವ ಪಟ್ಟದ್ದೇವರು ನಡೆದಾಡುವ ದೇವರೆಂದೇ ಪ್ರಸಿದ್ಧರಾದವರು. ಅಂಥವರ ಗರಡಿಯಲ್ಲಿ ಪಳಗಿದವರು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು. ಬಸವಣ್ಣನವರ ತತ್ತ್ವ ಸಿದ್ಧಾಂತದ ಪ್ರಸಾರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಸಮಗ್ರ ಪರಿವರ್ತನೆ ಜೊತೆಗೆ ಸಾಹಿತ್ಯ-ಸಂಸ್ಕøತಿ ಸಂವರ್ಧನಕ್ಕಾಗಿ ದೇಶ-ವಿದೇಶಗಳಲ್ಲಿ ಚರಿಸಿ ಜಂಗಮರಾದವರು. ಶೈಕ್ಷಣಿಕ ಸುಧಾರಣೆಗಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದವರು.

ಅವರ ಅನುಪಮ ಸೇವೆ ಮತ್ತು ಪೂರೈಸಿದ ಕಾರ್ಯಗಳನ್ನು ಗಮನಿಸಿ, ಜಯನಗರದ ಅನುಭವÀ ಮಂಟಪದಲ್ಲಿ ನಡೆಯುತ್ತಿರುವ ‘ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ’ಯಂದು, ‘ಡಾ. ಬಿ.ಡಿ.ಜತ್ತಿ ಸಂಶೋಧನ ಪ್ರಶಸ್ತಿ-2024’ ಈ ಪ್ರಶಸ್ತಿಯನ್ನು ಪರಮಪೂಜ್ಯ ಶ್ರೀ ಮ.ಘ.ಚ. ಡಾ. ಬಸವಲಿಂಗ ಪಟ್ಟದ್ದೇವರು ಅವರಿಗೆ ನೀಡಿ ಗೌರವಿಸಲಾಗುತ್ತಿದೆ.

ಈ ಕಾರ್ಯಕ್ರಮದ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇದರೊಂದಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here