ಶಹಾಬಾದ ಕಾರ್ಖಾನೆಗಳನ್ನು ಪ್ರಾರಂಭಿಸಲು ಹಿರೇಮಠ ಒತ್ತಾಯ

0
65

ಶಹಾಬಾದ: ತಾಲೂಕಿನ ಜೆಪಿ ಕಾರ್ಖಾನೆ ಮತ್ತು ಜಿಇ ಕಾರ್ಖಾನೆ ಕಾರ್ಖಾನೆಗಳನ್ನು ಪುನಃ ಪ್ರಾರಂಭ ಮಾಡಲು ಮಂಗಳವಾರ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ ಹಿರೇಮಠ ಒತ್ತಾಯಿಸಿದರು.

ಬಹು ವರ್ಷಗಳಿಂದ ಇಲ್ಲಿನ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ತೆರೆದರೂ ಆಟ್ಟಕ್ಕಂಟು ಲೆಕ್ಕಕ್ಕಿಲ್ಲದೇ ನಡೆಯುತ್ತಿವೆ.ಇದರಿಂದ ತಾಲೂಕಿನಲ್ಲಿ ನಿರುದ್ಯೋಗ ಸೃಷ್ಟಿಯಾಗಿದೆ.ಜನರು ಕೆಲಸವಿಲ್ಲದೇ ಬೆಂಗಳೂರು, ಬಾಂಬೆ,ಪುನಃ, ಹೈದ್ರಬಾದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

Contact Your\'s Advertisement; 9902492681

ಇದರಿಂದ ಇಲ್ಲಿನ ವ್ಯಾಪಾರ ವಹಿವಾಟಿನ ಮೇಲೆಯೂ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿದೆ. ಅಲ್ಲದೇ ಬಿಗಿಯಾದ ನಿಯಮಗಳಿಂದ ಕಲ್ಲಿನ ಗಣಿ, ಪಾಲಿಷ್ ಮಶಿನ್‍ಗಳು ಬಹುತೇಖ ತಮ್ಮ ಕಾರ್ಯವನ್ನು ನಿಲ್ಲಿಸಿವೆ.ಲ್ಲಿಯೂ ಕೆಲ ಕಳೆದುಕೊಂಡು ಜನರ ಬದುಕು ಮೂರಾಬಟ್ಟೆಯಾಗುತ್ತಿದೆ.ಇಲ್ಲಿನ ಜನರಿಗೆ ಕೆಲಸವಿಲ್ಲದೇ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಆದ್ದರಿಂದ ಈ ಎರಡು ಕಾರ್ಖಾನೆಗಳು ಪ್ರಾರಂಭವಾದರೆ ಸುಮಾರು 10 ಸಾವಿರ ಜನರಿಗೆ ಉದ್ಯೋಗ ದೊರಕಿದಂತಾಗುತ್ತದೆ. ಇದರಿಂದ ತಾಲೂಕಿನ ಆರ್ಥಿಕ ಮಟ್ಟ ಸುಧಾರಿಸುತ್ತದೆ.ಅಲ್ಲದೇ ಕಲ್ಲಿನ ಗಣಿ ಪ್ರಾರಂಭ ಮಾಡಲು ನಿಯಮಗಳನ್ನು ಸಡಿಲಿಸಿದಲ್ಲಿ ಗಣಿಗಳು ಪ್ರಾರಂಭವಾಗಿ ಇಲ್ಲಿನ ಜನರಿಗೆ ಉದ್ಯೋಗ ಒದಗುತ್ತದೆ.ಇಲ್ಲಿನ ಜನರ ಬದುಕಿಗೆ ಆಸರೆಯಾಗುತ್ತದೆ.

ಆ ನಿಟ್ಟಿನಲ್ಲಿ ಮಂಗಳವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸರಕಾರ ಕಾರ್ಖಾನೆಗಳನ್ನು ಪ್ರಾರಂಭ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಈ ಭಾಗದ ಜನರ ಬದುಕಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here