ಕಲಬುರಗಿ: ನವ ಕರ್ನಾಟಕ MRW/VRW/URW ಗೌರವ ಧನ ಕಾರ್ಯಕರ್ತರ ಖಾಯಮಾತಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ದಲಿತ ಸೇನೆ ಜಿಲ್ಲಾ ಸಮಿತಿಯಿಂದ ಬೆಂಬಲ.
ಈ ಮೂಲಕ ಅಖಿಲ ಕರ್ನಾಟಕ ದಲಿತ ಸೇನೆ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಂಜೀವಕುಮಾರ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಮನವಿ.
ಕರ್ನಾಟಕ ರಾಜ್ಯದಲ್ಲಿ 6800 MRW/VRW/URW ಗೌರವ ಧನ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದು ಸುಮಾರು 16 ವರ್ಷಗಳಿಂದ ಖಾಯಮಾತಿಗಾಗಿ ವಿವಿಧ ರೀತಿಯ ಹೋರಾಟಗಳು, ಪ್ರತಿಭಟನೆಗಳು ಹತ್ತಾರು ಮನವಿ ಪತ್ರಗಳು ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ, ಮುಖ್ಯ ಮಂತ್ರಿಗಳಿಗೆ, ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಕಳೆದ ಹತ್ತಾರು ವರ್ಷಗಳಿಂದ ನೀಡಿದರು ವಿಕಲಚೇತನರ ಈ ಖಾಯಮಾತಿ ಬೇಡಿಕೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ
ಕಲಬುರಗಿಯ ಉದ್ಯಾನವನದ ಗಾಂಧೀಜಿ ಪ್ರತಿಮೆ ಬಳಿ ದಿನಾಂಕ: 14-09-2024 ರಿಂದ ನವ ಕರ್ನಾಟಕ MRW/VRW/URW ಗೌರವ ಧನ ಕಾರ್ಯಕರ್ತರ ಖಾಯಮಾತಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ದಲಿತ ಸೇನೆ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಕಾಂಬಳೆಯವರು ಸರ್ಕಾರಕ್ಕೆ ಆಗ್ರಹಪಡಿಸಿದ್ದಾರೆ.