ಯುವಜನ ಒಕ್ಕೂಟದಿಂದ 76 ನೇ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಆಚರಣೆ

0
102

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ ರ ಮೂರ್ತಿಗೆ ಮಾಲಾರ್ಪಣೆ ಮತ್ತು ರಾಷ್ಟ್ರೀಯ ಗೀತೆ ವಾಚಿಸುವ ಮೂಲಕ ನೈಜ ಕ. ಕ. 76 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಕರ್ನಾಟಕ ಯುವಜನ ಒಕ್ಕೂಟದ ವತಿಯಿಂದ ಬುಧವಾರ ಆಚರಿಸಲಾಯಿತು.

ನಿವೃತ್ತ ಶಿಕ್ಷಕ ಹಿರಿಯರಾದ  ಎಸ್.ಎ. ಪಾಟೀಲ ನೇತೃತ್ವದಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿಗಳಾದ ಶಿವಲಿಂಗಪ್ಪಾ ಅಷ್ಟಗಿ ಮತ್ತು ಬಿಜೆಪಿಯ ಮುಖಂಡರಾದ ರಾಘವೇಂದ್ರ ಕುಲಕರ್ಣಿ ಸಂಮುಖ್ಯದಲ್ಲಿ 13 ತಿಂಗಳು 3 ದಿನದ ನಂತರ ನಿಜಾಮರ ಆಳುವಿಕೆಯಿಂದ ವಿಮೋಚನೆ ಸಿಕ್ಕಿದಿನ  18 ನೇ ಸೆಪ್ಟೆಂಬರ್ ಆಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಜೆ. ಎನ್ ಚೌಧರಿ ಮತ್ತು ಕೇಂದ್ರ ಗೃಹ ಸಚಿವ ಸರದಾರ ವಲ್ಲಭಭಾಯಿ ಪಟೇಲರಲ್ಲಿ ತಲೆಭಾಗಿ ಶರಣಾಗಿ ತನ್ನ ಒಟ್ಟು ಮಂತ್ರಿ ಮಂಡಲವನ್ನು ಹಸ್ತಾತರಿಸಿದನು. ಅಲ್ಲದೆ ತನ್ನ ಪ್ರಜೆ ಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿದರು ಎಂದು ಮಾಹಿತಿ ನೀಡಿದರು. ನಿಜಾಮರು ಭಾರತದ ಪ್ರಜೆಗಳಾಗಿದ್ದಿರಿ,  ಭಾರತದ ಕಾನೂನಿಗೆ ತಲೆ ಬಾಗಬೇಕು ಅಲ್ಲದೆ ಅದೇಶ ಹೋರಿಸಿದರು ಎಂದು  ಲಿಖಿತ ದಾಖಲೆ ಪರಿಗಣಿಸಿ ಸೆಪ್ಟೆಂಬರ್ 18 ರಂದು ಈ ಭಾಗ ವಿಲಿನಗೊಂಡ ದಿನವಾಗಿ ಸ್ಮರಿಸಿ ಸ್ವಾತಂತ್ರೋತ್ಸವ ಆಚರಿಸಿ ಹೋರಾಟಗಾರರಿಗೆ ನಮನ ಸಲ್ಲಿಸಲಾಯಿತು.

371 j ತಿದ್ದುಪಡಿ ಮಾಡಿದಂತೆ ಕೇಂದ್ರ ಸರಕಾರ ದಾಖಲೆ ಪರಿಗಣಿಸಿ ರಾಜ್ಯ ಸರ್ಕಾರದ ಮೂಲಕ 15 ಆಗಸ್ಟ್ ರಂತೆ ಈ ಭಾಗಕ್ಕೆ ರಜೆ ಘೋಷಣೆ ಮಾಡಿ ಆಚರಿಸಲು ನಿರ್ದೇಶನ ನೀಡಬೇಕು ಎಂದು ಒಕ್ಕೂಟ ದ ಅಧ್ಯಕ್ಷ ರಾದ ಅನಂತ ಗುಡಿ ಆಗ್ರಹಿಸಿದರು.

ಒಕ್ಕೂಟದ ರಾಜ್ಯ ಸಂಚಾಲಕ ಜೆ. ವಿನೋದ ಕುಮಾರ ಸ್ವಾಗತಿಸಿದರು.  ಪ್ರಾಸ್ತಾವಿಕವಾಗಿ ವಿಭಾಗೀಯ ಅಧ್ಯಕ್ಷರಾದ ಉದಯಕುಮಾರ ಜೇವರ್ಗಿ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ರವರು ಈ ಭಾಗದಲ್ಲಿ ಸೇವೆ ಸಲ್ಲಿಸಿ ಹೋಗಿದ್ದಾರೆ ನಮ್ಮ ಮನವಿಯನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಬೇಕು ಮತ್ತು ಮುಂದಿನ ವರ್ಷ ಸೆಪ್ಟೆಂಬರ್18 ನೈಜ ಮರು ಸ್ವಾತಂತ್ರೋತ್ಸವ ಎಂದು ತಿದ್ದುಪಡಿ ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನ್ಯಾಯವಾದಿ ರಾಘವೇಂದ್ರ ಕುಲಕರ್ಣಿ ಮಾತನಾಡಿ ಪ್ರಸ್ತುತ ಮುಖ್ಯಮಂತ್ರಿ ಒಬ್ಬ ನ್ಯಾಯವಾದಿ ಯಾಗಿದ್ದು ಕಾನೂನಾತ್ಮಕವಾಗಿ ಸರಿಪಡಿಸಿ, ಹೇಗೆ ಯಡಿಯೂರಪ್ಪ ಕ.ಕ ನಾಮಕರಣ ಗೊಳಿಸಿ ಉತ್ಸವ ಆಚರಿಸಲು ಆದೇಶಿಸಿದ್ದಾರೆ ಅದೇ ರೀತಿ ತಮ್ಮ ಹೆಸರು ಕೂಡಾ  ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹೇಳಿದರು.

ಹಿರಿಯ ನ್ಯಾಯ ವಾದಿ ಭಂಡಾರಿ ರಾಜಗೋಪಾಲ ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ಜಗನ್ನಾಥ ಮಂಠಾಲೆ  ಘೋಷಣೆಗಳು ಕೂಗಿದರು ಕಾರ್ಯಕ್ರಮ ದಲ್ಲಿ ಒಕ್ಕೂಟದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here