ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಕೊಡಿ: ಮುಖ್ಯಮಂತ್ರಿಗಳಿಗೆ ಪ್ರಾಂತ ರೈತ ಸಂಘದ ಆಗ್ರಹ

0
77

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ತೊಗರಿ ಬೆಳೆ ನಷ್ಟವಾಗಿದ್ದು, ಉತ್ಪಾದನೆ ಆಧಾರದಲ್ಲಿ ಪರಿಹಾರ ಕೊಡುವಂತೆ ಹಾಗೂ ಕಬ್ಬಿನ ಬಾಕಿ ಹಣವನ್ನು ಕೊಡಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಒತ್ತಾಯಿಸಿದರು.

ಮಂಗಳವಾರ ನಗರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದು ಒಟ್ಟು 606884 ಹೆಕ್ಟೆರ್,, ಹೆಸರು ಬಿತ್ತನೆ ಮಾಡಿದ್ದು ಒಟ್ಟು 28655 ಹೆಕ್ಟೆರ್, ಉದ್ದು ಬಿತ್ತನೆ ಮಾಡಿದ್ದು 55444 ಹೆಕ್ಟೆರ್ ರೈತರು ಬಿತ್ತಿದ್ದ ಬೆಳೆಗಳ ಮೇಲೆ ನಂಬಿ ಕುಳಿತ ರೈತರಿಗೆ ಮಳೆ ಬಂದು ಗಾಯದ ಮೇಲೆ ಬರೆ ಎಳೆದಂತಾಗಿದೆ. ತೊಗರಿಯ ನಾಡಿನಲ್ಲಿ ಈ ವರ್ಷ ತೊಗರಿ ಬೆಳೆ ಹಳ್ಳದ ಹೊಲಗಳು, ತೆಗ್ಗಿನ ಹೊಲಗಳು, ನಾಲದ ಹೊಲಗಳು, ಕೆರೆ ನದಿ ದಂಡೆಯಲ್ಲಿರುವ ಹೊಲಗಳು, ಮುಖ್ಯ ಕಾಲುವೆ, ಮರಿ ಗಾಲುವೆ ಪಕ್ಕದಲ್ಲಿರುವ ಹೊಲಗಳು ತೊಗರಿ ಹಳದಿ ಬಣ್ಣ ಆಗಿ ನೀರು ಜಾಸ್ತಿಯಾಗಿ ತೊಗರಿ ಹಾನಿಯುಂಟು ಆಗುವ ಸಾಧ್ಯತೆಗಳು ಹೆಚ್ಚಿದೆ. ಇಲ್ಲಿಯವರೆಗೆ ಜಿಲ್ಲೆಯ ರೈತರ ಪರಿಸ್ಥಿತಿ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಯಾವ ರೈತರ ಯಾವ ಬೆಳೆಗಳ ಬಗ್ಗೆ ಸಮಕ್ಷಮ ಕಾಣಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಲಿ. ತಕ್ಷಣವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಅತಿ ಮಳೆಯಿಂದ ಹಾನಿಯುಂಟಾದ ಬೆಳೆ ಸಮೀಕ್ಷೆ ನಡೆಸಿ ಪ್ರತಿ ಎಕರೆ ಬೆಳೆವಾರು ಉತ್ಪಾದನೆ ಆಧಾರದಲ್ಲಿ ಬೆಳೆ ಹಾನಿ ಅಂದಾಜಿಸಿ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

Contact Your\'s Advertisement; 9902492681

ಜಿಲ್ಲೆಯಾದ್ಯಂತ ನದಿ ಕೆರೆ ಹಳ್ಳಕೊಳ್ಳ ನಾಲ ನರಿ ರಸ್ತೆಗಳು ಹದಗೆಟ್ಟು ಹೋಗಿವೆ. ಡಾಂಬರಿಕರಣ ರಸ್ತೆ ಕಿತ್ತಿ ಹೋಗಿವೆ ತೆಗ್ಗು ಗುಂಡಿಗಳು ಬಿದ್ದಿವೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಜನ ಜಾನುವಾರು ಗಳು ಜನರು ಓಡಾಡಲು ಬಾರದಂತಾಗಿದೆ. ಅದು ಎಷ್ಟೋ ಗ್ರಾಮಗಳಲ್ಲಿ ಮನೆಗಳು ಬಿದ್ದಿವೆ. ಎಷ್ಟೋ ಗ್ರಾಮಗಳಲ್ಲಿ ಮನೆಗಳಲ್ಲಿ ಸಹ. ಮಳೆ ನೀರು ಹೊಕ್ಕು ಹಾನಿಯಾಗಿವೆ. ಬಡವರ ಮನೆಗಳು ಬಿದಿಗೆ ಬಿದ್ದಿವೆ. ಸೂರು ಇಲ್ಲದೆ ಜನರು ಸಾರ್ವಜನಿಕ ಪರದಾಡುವಂತಾಗಿದೆ. ತಕ್ಷಣವೇ ರಸ್ತೆ ದುರಸ್ತಿ ಮಾಡಬೇಕು. ಮನೆಗಳಲ್ಲಿ ಮಳೆ ನೀರು ಹೊಕ್ಕಿರುವ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ರೇಣುಕಾ ಶುಗರ್ಸ್, ಹಾವಳಗಾ ಸಕ್ಕರೆ ಕಾರ್ಖಾನೆ ಸೇರಿ ಒಟ್ಟು 23000 ಜನ ರೈತರ ಒಟ್ಟು 10 ಲಕ್ಷ ಟನ್ ಎಂಎಸ್‍ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 112 ರೂ.ಗಳಂತೆ ಒಟ್ಟು ಹಣ 112000000 ರೂ.ಗಳ ಕಬ್ಬಿನ ಬಾಕಿ ಹಣ ಕೊಡಬೇಕು. ಚಿಣಮಗೆರಾ ಸಕ್ಕರೆ ಕಾರ್ಖಾನೆಯಲ್ಲಿ ಎಂಎಸ್‍ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 162 ರೂ.ಗಳಂತೆ ಒಟ್ಟು 25000 ಜನ ರೈತರು ಮತ್ತು ಒಟ್ಟು 11 ಲಕ್ಷ ಟನ್ ಕಬ್ಬಿನ ಬಾಕಿ ಹಣ ಒಟ್ಟು ಹಣ 178200000 ರೂ.ಗಳ ಬಾಕಿ ಹಣ ಕೊಡಬೇಕು. ಭೂಸನೂರುಸಕ್ಕರೆ ಕಾರ್ಖಾನೆ ಎಂಎಸ್‍ಪಿ ಪ್ರಕಾರ 3018 ಪ್ರತಿ ಟನ್ ಕಬ್ಬಿಗೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಭೂಸನೂರು ಸಕ್ಕರೆ ಕಾರ್ಖಾನೆ ಈಗಾಗಲೇ ಪ್ರತಿ ಟನ್ ಕಬ್ಬಿಗೆ ಎಂಎಸ್‍ಪಿ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ 2450ರೂ.ಗಳನ್ನು ಕೊಟ್ಟು ಕಬ್ಬು ಬೆಳೆಗಾರರ ಮಹಾ ಮೋಸ ಮಾಡಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಕೊಡಬೇಕು ಎಂದು ಆಗ್ರಹಿಸಿದ ಅವರು, ಉಗಾರ್ ಶುಗರ್ಸ್ ಸಕ್ಕರೆ ಕಾರ್ಖಾನೆ ಜೇವರ್ಗಿ ತಾಲ್ಲೂಕಿನ ನಾಗರಹಳ್ಳಿ ಸಕ್ಕರೆ ಕಾರ್ಖಾನೆ ಎಂಎಸ್‍ಪಿ ಪ್ರಕಾರ ಪ್ರತಿ ಟನ್ ಕಬ್ಬಗೆ 3150 ರೂ.ಗಳನ್ನು ಕೊಡಬೇಕು. ಸಕ್ಕರೆ ಇಳುವರಿ ಆದರದಲ್ಲಿ ಸಕ್ಕರೆ ಕಾರ್ಖಾನೆ ಜೇವರ್ಗಿ ತಾಲ್ಲೂಕಿನ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಉಗಾರ್ ಶುಗರ್ಸ್ ನಾಗರಹಳ್ಳಿ ಸಕ್ಕರೆ ಕಾರ್ಖಾನೆ ಈಗಾಗಲೇ ಪ್ರತಿ ಟನ್ನ ಕಬ್ಬಿಗೆ 2500 ರೂ.ಗಳು ಮಾತ್ರ ಕೊಟ್ಟು ಕೈ ತೊಳಕೊಂಡಿದ್ದಾರೆ. ಕಬ್ಬು ಬೆಳೆಗಾರರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದ ಅವರು, ಸಕ್ಕರೆ ಇಳುವರಿಯನ್ನ ಪರೀಕ್ಷಿಸಲು ರೈತರ ಒಳಗೊಂಡಂತಹ ಸಮಿತಿಯನ್ನ ರಚಿಸದೆ ಇರುವುದರಿಂದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಇಳುವರಿಯನ್ನ ಕಡಿಮೆ ನಿಗದಿಪಡಿಸುವುದರ ಮೂಲಕ ರೈತರನ್ನು ವಂಚಿಸುತ್ತಿರುವ ಬಗ್ಗೆ ಹಾಗೂ ತೂಕದಲ್ಲಿ ವ್ಯತ್ಯಾಸ ಆಗುತ್ತಿರುವುದರ ಬಗ್ಗೆ ಚರ್ಚಿಸಿ ಅಳತೆ ಮತ್ತು ತೂಕ ಮಾಪನ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರವೇ ಎಪಿಎಂಸಿಗಳ ಮೂಲಕ ವೇ ಬ್ರಿಡ್ಜ್ ನಿರ್ಮಿಸಿ ತೂಕ ಮಾಡಬೇಕು. 2022- 2023ನೇ ಸಾಲಿನಲ್ಲಿ ಪ್ರತಿ ಟೆನ್ ಕಬ್ಬಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಎಸ್‍ಎಪಿ ಪ್ರತಿ ಟನ್‍ಗೆ ನೂರು ರೂ.ಗಳು ಮತ್ತು ಡಿಸ್ಟೀಲರಿ ಇರುವ ಕಾರ್ಖಾನೆಗಳು 150 ರೂ.ಗಳ ಬಾಕಿ ಹಣ ನೀಡಬೇಕೆಂಬ ತೀರ್ಮಾನವನ್ನು ಜಾರಿಗೊಳಿಸುವ ಸಂಬಂಧ ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಲಾಭದಲ್ಲಿ ರೈತರಿಗೆ ಪಾಲು ನೀಡಬೇಕೆಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದ್ದು, ಜಿಲ್ಲೆಯ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಕೆಪಿಆರ್ ಸಕ್ಕರೆ ಕಂಪನಿಗಳಿಂದ ರೈತರಿಗೆ ಪ್ರತಿ ಟನ್ ಬರಬೇಕಾಗಿರುವ 112 ಮತ್ತು 162 ಬಾಕಿ ಉಳಿಸಿಕೊಂಡಿರುವುದರ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಅವರಿಗೆ ಅವರ ಮೇಲೆ ಕ್ರಮ ಜರುಗಿಸಲು ನಿರ್ದೇಶನ ನೀಡಿದ್ದಾರೆ. ಅವರ ಕ್ರಮದ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುವುದು , ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಮತ್ತು ರೈತರು ಸಹ ಸಕ್ಕರೆ ನಿರ್ದೇಶಕರ ಆದೇಶದ ವಿರುದ್ಧವಾಗಿ ಕಾರ್ಖಾನೆ ಮಾಲೀಕರು ನಡೆದುಕೊಂಡಿದ್ದರೆ. ಅವರ ಮೇಲೆ ವೈಯಕ್ತಿಕವಾಗಿಯೂ ವಂಚನೆ ಪ್ರಕರಣವನ್ನು ದಾಖಲಿಸಬಹುದು ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಭೀಮಾ ನದಿಯ ಅಫಜಲಪುರ ತಾಲ್ಲೂಕಿನ ಘೂಳೂರು ಮತ್ತು ಜೇವರ್ಗಿ ತಾಲ್ಲೂಕಿನ ಮೊನಟಗಿ ಬ್ರಿಜ್ ಕಂ ಬ್ಯಾರೇಜ್ ಕೆಲಸ ಮುಗಿದು ಎರಡು ವರ್ಷ ಗತಿಸಿದೆ. ಸರ್ಕಾರದ ಹಣ ಖರ್ಚಾದರು ರೈತರಿಗೆ ಮಾತ್ರ ಉಪಯೋಗ ಆಗುತ್ತಿಲ್ಲ. ರೈತರ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗಿದೆ. ಮೊನಟಗಿ ರೈತರಿಗೆ ಒಟ್ಟು 32 ಎಕರೆ ಜಮೀನಿಗೆ ಪರಿಹಾರ ಕೊಡಬೇಕು. ಬ್ರಿಜ್ ಕಂ ಬ್ಯಾರೇಜ್ ಮುಳುಗಡೆ ಪ್ರದೇಶದಲ್ಲಿ ಒಟ್ಟು ರೈತರ ಜಮೀನಿಗೆ ಸರ್ಕಾರ ಪರಿಹಾರ ಕೊಟ್ಟಿರುವುದಿಲ್ಲ. ಹೀಗಾಗಿ ರೈತರ ನ್ಯಾಯಯುತ ವಾಗಿ ಅನ್ನದಾತರು ಜಮೀನು ಮುಳುಗಡೆ ಪ್ರದೇಶವಾಗಿದೆ ಮುಳುಗಡೆ ಆದ ರೈತರಿಗೆ ಪರಿಹಾರ ಕೊಡಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದಕಾರಣ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ಮುಳುಗಡೆ ಆದ ಗೂಳುರು ರೈತರಿಗೆ ಒಟ್ಟು 13 ಎಕರೆ 23 ಗುಂಟೆ ಜಮೀನು ಗೂಳುರು ರೈತರಿಗೆ ಪರಿಹಾರ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲೆಯ ಬೆಣ್ಣೆತೊರೆ ಆಣೆಕಟ್ಟು, ಗಂಡೊರಿ ನಾಲಾ ಆಣೆಕಟ್ಟು, ಮುಲ್ಲಾಮಾರಿ ಎತ ನೀರಾವರಿ ಆಣೆಕಟ್ಟು, ಭೀಮಾ ನದಿ ನೀರು ರೈತರ ಜಮೀನುಗಳಿಗೆ ನೀರು ಹರಿಸುವ ಹದಗೆಟ್ಟ ಕಾಲುವೆಗಳು ಹೂಳೆತ್ತಬೇಕು. ಮತ್ತು ಕಾಲುವೆಗಳು ಸ್ವಚ್ಛಗೊಳಿಸುವ ಕ್ರಿಯಾ ಯೋಜನೆ ತಯಾರಿಸಿ ನೀರಾವರಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲೆಯಾದ್ಯಂತ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಗಳು ಮತ್ತು ಇತರೆ ಇರುವ ಹುದ್ದೆಗಳು ಭರ್ತಿ ಮಾಡುವಂತೆ, ಸರ್ಕಾರಿ ಆಸ್ಪತ್ರೆಯಲ್ಲಿ ಕೊರತೆ ಇರುವ ಯಂತ್ರಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆ ಒಟ್ಟು ಶಿಕ್ಷಕರ ಹುದ್ದೆ ಮಂಜೂರಾದ ಶಿಕ್ಷಕರು 45431 ಇದ್ದು, ಒಟ್ಟು ಖಾಲಿ ಇರುವ ಶಿಕ್ಷಕರ ಹುದ್ದೆಗಳು 14139, ಸರ್ಕಾರಿ ಪ್ರೌಢ ಶಾಲೆ ಒಟ್ಟು ಶಿಕ್ಷಕರ ಹುದ್ದೆಗಳು ಮಂಜೂರಾದ 11680 ಶಿಕ್ಷಕರ – ಒಟ್ಟು ಖಾಲಿ ಇರುವ ಶಿಕ್ಷಕರ ಹುದ್ದೆಗಳು 3495 ಶಿಕ್ಷಕರ – ಕಿರಿಯ ಪ್ರಾಥಮಿಕ ಒಟ್ಟು ಶಾಲೆಗಳು 791 ಶಾಲೆಗಳು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು 989 ಶಾಲೆಗಳು – ಸರ್ಕಾರಿ ಪ್ರೌಢ ಶಾಲೆಗಳು 298 ಶಾಲೆಗಳು. ಜಿಲ್ಲೆಯಲ್ಲಿ ಒಟ್ಟು ಸರ್ಕಾರಿ ಶಾಲೆಗಳು 2078 ಶಾಲೆಗಳು ಇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಾಫರ್‍ಖಾನ್, ದಿಲೀಪ್ ನಾಗೂರೆ, ರಾಯಪ್ಪ ಹುರುಮುಂಜಿ, ಚೆನ್ನಪ್ಪ, ಶಿವಾನಂದ್ ಪಾಟೀಲ್ ಐನಾಪೂರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here