ಕಲಬುರಗಿ: ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ವಿವೇಕಾನಂದ ಪ್ರಾಥಮಿಕ ಮತ್ತು ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಆಟೋಟಗಳಲ್ಲಿ ಗೆಲ್ಲುವುದರ ಮೂಲಕ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.
ಪ್ರೌಢ ವಿಭಾಗ : 100 ಮಿ ಓಟ -ಪ್ರಥಮ (ಶ್ರೀನಾಥ ), 800 ಓಟ – ಪ್ರಥಮ (ಪ್ರಶಾಂತ ), ಬಾಲಕರ 4*100ಮಿ ರಿಲೇ – ಪ್ರಥಮ, ತಿವಿಧ ಜಿಗಿತ – ಪ್ರಥಮ ( ಶ್ರೀನಾಥ ), ಉದ್ದಜಿಗಿತ – ದ್ವಿತೀಯ (ಶ್ರೀನಾಥ ), 1500ಮಿ ಓಟ – ದ್ವಿತೀಯ (ಸಾಯಬಣ್ಣ ),ಗುಂಡು ಎಸೆತ – ದ್ವಿತೀಯ ( ಐಶ್ವರ್ಯ ), ಗುಂಡು ಎಸೆತ – ದ್ವಿತೀಯ ( ಶ್ರೀನಾಥ ).
ಪ್ರಾಥಮಿಕ ವಿಭಾಗ : 4*100 ಮಿ ರಿಲೇ – ಪ್ರಥಮ, 200 ಓಟ – ಪ್ರಥಮ (ಯಶ್ ), 200ಓಟ – ಪ್ರಥಮ (ಪ್ರಕೃತಿ ).
ಮಕ್ಕಳ ಈ ಸಾಧನೆಗೆ ಸಂಸ್ಥೆ ಅಧ್ಯಕ್ಷ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಆಡಳಿತ ಮಂಡಳಿ ಜಿಲ್ಲಾ ಮಟ್ಟಕ್ಕೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಪ್ರಾಚಾರ್ಯರ ಕೆ. ಐ. ಬಡಿಗೇರ್, ವಿದ್ಯಾಧರ ಖಂಡಾಳ, ಗಂಗಪ್ಪ ಕಟ್ಟಿಮನಿ, ದೈಹಿಕ ಶಿಕ್ಷಕರಾದ ಭೀಮಾಶಂಕರ ಬಮ್ಮನಳ್ಳಿ, ಶಿವಕುಮಾರ ಸರಡಗಿ, ಶರಣು ಸಜ್ಜನ್, ಶ್ಯಾಮಸುಂದರ ದೊಡ್ಡಮನಿ, ರೋಹಿತ್ ರಾವೂರಕರ್, ವಿಜಯಲಕ್ಷ್ಮಿ ಬಮ್ಮನಳ್ಳಿ, ಸಿದ್ದಲಿಂಗ ಬಾಳಿ ಉಪಸ್ಥಿತರಿದ್ದರು.