ಶೇ.100 ರಷ್ಟು ಫಲಿತಾಂಶ ಸಾಧಿಸಿದ ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ

0
383

ಕಲಬುರಗಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಫಲಿತಾಂಶದ ಪಟ್ಟಿಯಲ್ಲಿ ಗೋದುತಾಯಿ ಶಿಕ್ಷಣ ಮಹಿಳಾ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಗೋದುತಾಯಿ ಶಿಕ್ಷಣ ಮಹಿಳಾ ಮಹಾವಿದ್ಯಾಲಯದ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ವಿದ್ಯಾರ್ಥಿನಿಯರು, ಜುಲೈ ತಿಂಗಳಿನಲ್ಲಿ ನಡೆದ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ. ಹಾಗೂ ತೃತೀಯ ಸೆಮಿಸ್ಟರ್‍ನಲ್ಲಿ ನೂರಕ್ಕೆ ನೂರರಷ್ಟು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿರುವುದು ವಿಶೇಷ. ಪರೀಕ್ಷೆಗೆ ಹಾಜರಾದ ಎಲ್ಲಾ ನೂರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

Contact Your\'s Advertisement; 9902492681

ಪ್ರಥಮ ಸೆಮಿಸ್ಟರ್‍ನಲ್ಲಿ, ಸರಸ್ವತಿ 93.3%, ನಾಗಲಕ್ಷ್ಮೀ ಜೆ. 93%, ರಾಧಿಕಾ ಎಸ್. 92%, ಶ್ವೇತಾ ಜೆ. 91.5%, ಸ್ನೇಹಾ ಬಿ. 91.5%, ಅಮೂಲ್ಯ 91%, ಕಾವ್ಯ ಡಿ. 91%, ಗುಂಡಮ್ಮಾ 90%, ಈರಮ್ಮಾ 90.33%, ವರ್ಷಾ 91.05%, ಭಾಗ್ಯಶ್ರೀ ಪಾಟೀಲ 91.2%, ಐಶ್ವರ್ಯಾ 90.33%, ಪ್ರೀತಿ 90%, ಲಕ್ಷ್ಮೀ ಎಸ್. 90%. ಸಂಗೀತಾ 90% ಅಂಕ ಪಡೆದು ತೇರ್ಗಡೆಯಾಗಿದ್ದಾರೆ.

ತೃತೀಯ ಸೆಮಿಸ್ಟರ್‍ನಲ್ಲಿ, ಚೈತ್ರಾ 94.16%, ಪೂಜಶ್ರೀ 93%, ಗಾಯತ್ರಿ 92.68% ಸ್ಪೂರ್ತಿ 92.33%, ಅಂಬಿಕಾ ಅರ್ 92.33%, ಶ್ರೇಯಾ. ಬಿ. 91.83%, ಪ್ರಿಯಾಂಕಾ 91.83%, ಮಮತಾ 91.61%, ಕಾವೇರಿ. ಪಿ. 91.5%, ಭುವನೇಶ್ವರಿ 90.83%, ಧರ್ಮಶ್ರೀ 90.83%, ಪ್ರಿಯಾಂಕಾ ಟಿ 90.66%, ನಿಕಿತಾ 90.13%. ಅಂಕ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಈ ಸಾಧನೆಗೆ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿಧ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಹರ್ಷ ವ್ಯಕ್ತಪಡಿಸಿ, ಗೋದುತಾಯಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯಕ್ಕೆ ಅತಿ ಹೆಚ್ಚು ಅಂಕಗಳಿಂದ ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಚಾರ್ಯರಾದ ಕಲ್ಪನಾ ಭೀಮಳ್ಳಿ ಹಾಗೂ ಎಲ್ಲಾ ಪ್ರಾಧ್ಯಾಪಕ ವೃಂದದವರಿಗೆ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here