ಮಹಾದೇವಿಯಕ್ಕಗಳ ಸಮ್ಮೇಳನ; ಸೆ. 21 ರಿಂದ

0
32

ಕಲಬುರಗಿ: ಇಲ್ಲಿನ ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಸೆ. 21ರಿಂದ ಎರಡು ದಿನಗಳ ಕಾಲ 14ನೇ ಮಹಾದೇವಿಯಕ್ಕಳ ಸಮ್ಮೇಳನ ಜಯನಗರದ ಅನುಭವ ಮಂಟಪದಲ್ಲಿ ಜರುಗಲಿದೆ ಎಂದು ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಹಾಗೂ ಸಮ್ಮೇಳನದ ಸಂಚಾಲಕಿ ಡಾ. ಜಯಶ್ರೀ ದಂಡೆ ತಿಳಿಸಿದರು.

ಚಿತ್ರಕಲಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ. ಶಾಂತಲಾ ನಿಷ್ಠಿ ಅವರು ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಮಕ್ಕಳಿಂದ ಉದ್ಘಾಟಿಸಲಾಗುವುದು.
ತೇಜಸ್ವಿ, ಖುಷಿ, ನಂದಿನಿ, ತನ್ವಿ, ಭಾಗ್ಯಶ್ರೀ, ಅಮುಕ್ತಮೌಲ್ಯ ಅನಾವರಣಗೊಳಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಎರಡು ದಿನಗಳಲ್ಲಿ ವಚನ- ನಿರ್ವಚನ, ಶರಣೆಯರ ಅಲೌಕಿಕ ಬದುಕು, ಶರಣೆಯರ ಏಕದೇವೋಪಾಸನೆ, ಶರಣೆಯರ ಧೋರಣೆ ಸೇರಿ 5 ಸಾಹಿತ್ಯಕ ಗೋಷ್ಠಿ, ವಚನ ನೃತ್ಯ, ಕುಟ್ಟುವ ಹಾಡು, ಭಜನೆ, ರೂಪಕ, ಬೀಸುವ ಹಾಡು, ಶರಣರ ಜಾನಪದ ಹಾಡು, ವಚನ ಗಾಯನ ಗಾಯನ-ದರ್ಶನ ಸೇರಿ 6 ಸಾಂಸ್ಕೃತಿಕ ಕಾರ್ಯಕ್ರಮ, ಉದ್ಘಾಟನೆ ಹಾಗೂ ಸಮಾರೋಪ ನಡಡಯಲಿದ್ದು, ಸುಮಾರು 170ಕ್ಕೂ ಹೆಚ್ಚು ಮಹಿಳೆಯರು ವೇದಿಕೆಯಲ್ಲಿ ತಮ್ಮ ಪ್ರತಿಭೆ ಮೆರೆಯಲಿದ್ದಾರೆ ಎಂದು ತಿಳಿಸಿದರು.

ಸೆ. 21ರಂದು ಬೆಳಗ್ಗೆ 8.30 ಗಂಟೆಗೆ ಮಹಾದೇವಿಯಕ್ಕಗಳ ಭಾವಚಿತ್ರ ಮೆರವಣಿಗೆ, 10 ಗಂಟೆಗೆ ಅಕ್ಕನ ಬೆಳಗು ಕಾರ್ಯಕ್ರಮ ಜರುಗಲಿದೆ. ಸೆ. 22ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ.‌ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿಯನ್ನು ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗಂಗಾಂಬಿಕಾ ಪಾಟೀಲ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here