ಶಹಾಪುರ: ಮಹಿಳೆ ಸಮಾಜದ ಬೆನ್ನೆಲುಬು

0
44

ಶಹಾಪುರ : ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು,ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ತಮ್ಮ ಆರೋಗ್ಯವನ್ನು ಅಪಾಡಿಕೊಳ್ಳುವುದರ ಜೊತೆಗೆ ಜೀವನ ಕಲೆ ಅರ್ಥೈಸಿಕೊಂಡು ಬದುಕಬೇಕೆಂದು ಉಪನ್ಯಾಸಕಿ ಚೈತ್ರ ಪಾಟೀಲ್ ಹೇಳಿದರು

ತಾಲೂಕಿನ ದೋರನಹಳ್ಳಿ ಗ್ರಾಮದ ಡಿ.ಡಿ.ಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಿತ್ಯ ಪ್ರತಿಷ್ಠಾನ ಬೆಂಗಳೂರು ಮತ್ತು ಸಾಧನಾ ಪ್ರತಿಷ್ಠಾನ ರಾಯಚೂರು ಹಾಗೂ ಕಲಾನಿಕೇತನ ಟ್ರಸ್ಟ್ ಸಗರ ಇವುಗಳ ಸಹಯೋಗದಲ್ಲಿ “ಮಹಿಳಾ ಆರೋಗ್ಯ ಮತ್ತು ಜೀವನ ಕಲೆ ಜಾಗೃತಿ ಶಿಬಿರರದಲ್ಲಿ ಭಾಗವಹಿಸಿ ಮಾತನಾಡಿದರು.ಮಹಿಳೆ ಸಮಾಜದ ಬೆನ್ನೆಲುಬು ಎಂಬುದನ್ನು ನಾವು ಯಾವತ್ತಿಗೂ ಎಂದೆಂದಿಗೂ ಮರೆಯಕೂಡದು ಎಂದು ನುಡಿದರು.

Contact Your\'s Advertisement; 9902492681

ಇನ್ನೋವ ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕಿ ನಿರ್ಮಲಾ ಮಾತನಾಡಿ ಯಾರ ಮೇಲೂ ಅವಲಂಬಿತರಾಗದೆ ಮಹಿಳೆಯರು ವೃತ್ತಿಪರ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು,ಹೊಲಿಗೆ ತರಬೇತಿ, ಬಟ್ಟೆ ಕತ್ತರಿಸುವುದು,ಕಸೂತಿ ಹಾಕುವುದು,ಸೆಣಬಿನ ಚೀಲಗಳು ಮತ್ತು ಅಗರ್ ಬತ್ತಿಗಳು ತರಬೇತಿ ಪಡೆದುಕೊಂಡು ಉತ್ತಮವಾದ ಜೀವನ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ,ಕಾಲೇಜಿನ ಪ್ರಾಂಶುಪಾಲರಾದ ಮಹೇಶ ಪತ್ತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಸಗರದ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷರಾದ ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಮಾರಂಭದ ವೇದಿಕೆಯ ಮೇಲೆ, ಪ್ರೇಮಲತಾ ಪ್ರತಿಭಾ ಸೇರಿದಂತೆ ಇತರರು ಉಪಸಿತರಿದ್ದರು ಲಕ್ಷ್ಮಿ ನಿರೂಪಿಸಿ,ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here